ಮ್ಯಾಂಚೆಸ್ಟರ್: ‘ಇಸ್ಲಾಮೊಫೋಬಿಕ್’ ಕೃತ್ಯಗಳಲ್ಲಿ 500 ಶೇಕಡ ಏರಿಕೆ

Update: 2017-06-23 13:51 GMT

ಲಂಡನ್, ಜೂ. 23: ಕಳೆದ ತಿಂಗಳು ಮ್ಯಾಂಚೆಸ್ಟರ್ ಸಂಗೀತ ಸಮ್ಮೇಳನವೊಂದರಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಮ್ಯಾಂಚೆಸ್ಟರ್‌ನಲ್ಲಿ ‘ಇಸ್ಲಾಮೊಫೋಬಿಕ್’ ದಾಳಿಗಳ ಸಂಖ್ಯೆಯಲ್ಲಿ ಸುಮಾರು 500 ಶೇಕಡದಷ್ಟು ಹೆಚ್ಚಾಗಿದೆ ಎಂದು ಅಧಿಕೃತ ಅಂಕಿಸಂಖ್ಯೆಗಳು ಹೇಳಿವೆ.

ಆ ದಾಳಿಯಲ್ಲಿ 22 ಮಂದಿ ಮೃತಪಟ್ಟಿದ್ದಾರೆ.

 ಮ್ಯಾಂಚೆಸ್ಟರ್ ಅರೀನಾದಲ್ಲಿ ನಡೆದ ಆ್ಯರಿಯಾನ ಗ್ರಾಂಡ್ ಸಂಗೀತ ಸಮ್ಮೇಳನದಲ್ಲಿ ನಡೆದ ದಾಳಿಯ ಬಳಿಕದ ಒಂದು ತಿಂಗಳ ಅವಧಿಯಲ್ಲಿ 224 ಮುಸ್ಲಿಮ್ ವಿರೋಧಿ ದ್ವೇಷಾಪರಾಧಗಳು ವರದಿಯಾಗಿವೆ ಎಂದು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು (ಜಿಎಂಪಿ) ಹೇಳಿದ್ದಾರೆ.

2016 ಇದೇ ಅವಧಿಯಲ್ಲಿ 37 ಪ್ರಕರಣಗಳು ವರದಿಯಾಗಿದ್ದವು.

ಇದು ಇಸ್ಲಾಮೊಫೋಬಿಕ್ ಘಟನೆಗಳಲ್ಲಿ ನಡೆದ 505 ಶೇಕಡ ಹೆಚ್ಚಳವಾಗಿದೆ.

‘‘ಗ್ರೇಟರ್ ಮ್ಯಾಂಚೆಸ್ಟರ್‌ನಲ್ಲಿ ವಿವಿಧ ಧರ್ಮಗಳು ಮತ್ತು ಹಿನ್ನೆಲೆಗಳ ಜನರಿದ್ದಾರೆ. ಈ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ನಾವು ಇಲ್ಲಿ ಯಾವುದೇ ರೀತಿಯ ದ್ವೇಷ ಅಥವಾ ತಾರತಮ್ಯವನ್ನು ಸಹಿಸುವುದಿಲ್ಲ’’ ಎಂದು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸ್‌ನ ಸಹಾಯಕ ಮುಖ್ಯ ಕಾನ್‌ಸ್ಟೇಬಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News