ಪಾಕ್: ಅವಳಿ ಸ್ಫೋಟದಲ್ಲಿ ಕನಿಷ್ಠ 18 ಸಾವು

Update: 2017-06-23 14:49 GMT

ಕ್ವೆಟ್ಟಾ (ಪಾಕಿಸ್ತಾನ), ಜೂ. 23: ಅಫ್ಘಾನಿಸ್ತಾನದೊಂದಿಗೆ ಗಡಿ ಹೊಂದಿರುವ ಪಾಕಿಸ್ತಾನದ ಕುರ್ರಮ್ ಬುಡಕಟ್ಟು ಜಿಲ್ಲೆಯ ಪರಚಿನಾರ್ ಎಂಬ ಸ್ಥಳದ ಜನನಿಬಿಡ ಮಾರುಕಟ್ಟೆಯೊಂದರಲ್ಲಿ ಶುಕ್ರವಾರ ಸಂಭವಿಸಿದ ಶಕ್ತಿಶಾಲಿ ಅವಳಿ ಸ್ಫೋಟಗಳಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ ಹಾಗೂ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಕುರ್ರಮ್ ಏಜನ್ಸಿಯ ಕೇಂದ್ರ ಸ್ಥಾನ ಪರಚಿನಾರ್‌ನಲ್ಲಿರುವ ಅಕ್ಬರ್ ಖಾನ್‌ಮಾರುಕಟ್ಟೆಯಲ್ಲಿ ಪ್ರಥಮ ಸ್ಫೋಟ ಸಂಭವಿಸಿತು ಎಂದು ಅಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಜನರು ಇಫ್ತಾರ್ ಮತ್ತು ಈದ್‌ಗಾಗಿ ಖರೀದಿಯಲ್ಲಿ ತೊಡಗಿದ್ದರು.

ಮೊದಲ ಸ್ಫೋಟದಲ್ಲಿ ಗಾಯಗೊಂಡಿದ್ದವರ ರಕ್ಷಣೆಗೆ ರಕ್ಷಣಾ ತಂಡದ ಸದಸ್ಯರು ಮತ್ತು ಸ್ಥಳೀಯರು ಧಾವಿಸಿದಾಗ ಎರಡನೆ ಸ್ಫೋಟ ಸಂಭವಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News