ಹಾಲೆ ಓಪನ್: ಫೆಡರರ್ ಕ್ವಾರ್ಟರ್ ಫೈನಲ್‌ಗೆ

Update: 2017-06-23 17:14 GMT

ಹಾಲೆ, ಜೂ.23: ಅಗ್ರ ಶ್ರೇಯಾಂಕದ ಆಟಗಾರ ರೋಜರ್ ಫೆಡರರ್ ಹಾಲೆ ಓಪನ್‌ನಲ್ಲಿ ಅಂತಿಮ-8ರ ಸುತ್ತಿಗೆ ಪ್ರವೇಶಿಸಿದ್ದಾರೆ.

18 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಫೆಡರರ್ ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯ ಮಿಸ್ಚಾ ಝ್ವೆರೆವ್‌ರನ್ನು 7-6(4), 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

 ಆಸ್ಟ್ರೇಲಿಯನ್ ಓಪನ್ ಜಯಿಸಿದ ಬಳಿಕ ಫ್ರೆಂಚ್ ಓಪನ್‌ನಿಂದ ಹೊರಗುಳಿದಿದ್ದ ಫೆಡರರ್ ಈ ವರ್ಷ ಇಂಡಿಯನ್ ವೆಲ್ಸ್ ಹಾಗೂ ಮಿಯಾಮಿ ಮಾಸ್ಟರ್ಸ್‌ ಪ್ರಶಸ್ತಿಯನ್ನು ಜಯಿಸಿದ್ದರು. ಮುಂದಿನ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಫ್ಲೊರಿಯನ್ ಮಯೆರ್‌ರನ್ನು ಎದುರಿಸಲಿದ್ದಾರೆ.

ಪ್ರಸ್ತುತ ಟೂರ್ನಮೆಂಟ್‌ನಲ್ಲಿಸತತ ಮೂರನೆ ಬಾರಿ ಗಾಯಾಳು ನಿವೃತ್ತಿಯಾಗಿರುವ ವಿಶ್ವದ ನಂ.9ನೆ ಆಟಗಾರ ಜಪಾನ್‌ನ ಕೀ ನಿಶಿಕೊರಿ ಅವರ ವಿಂಬಲ್ಡನ್ ಸಿದ್ಧತೆಗೆ ತೀವ್ರ ಹಿನ್ನಡೆಯಾಗಿದೆ.

3ನೆ ಶ್ರೇಯಾಂಕದ ನಿಶಿಕೊರಿ ಬೆನ್ನುನೋವಿನಿಂದಾಗಿ ಪಂದ್ಯದಿಂದ ಹಿಂದೆ ಸರಿದಾಗ ರಶ್ಯದ ಆಟಗಾರ ಕರೆನ್ ಖಚನೊವ್ ಮೊದಲ ಸೆಟ್‌ನಲ್ಲಿ 3-2 ಮುನ್ನಡೆಯಲ್ಲಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News