×
Ad

ನಟಿ ಅಪಹರಣ ಯತ್ನ ಪ್ರಕರಣ: ಬ್ಲ್ಯಾಕ್‌ ಮೇಲ್‌ ಮಾಡಲಾಗುತ್ತಿದೆ ಎಂದು ದಿಲೀಪ್, ನಾದಿರ್ ಶಾ ದೂರು

Update: 2017-06-24 16:15 IST

ಕೊಚ್ಚಿ,ಜೂ. 24: ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದ ಆರೋಪಿ ಪಲ್ಸರ್ ಸುನೀಲ್‌ನ ಸಹಕೈದಿ ತಮಗೆ ಬೆದರಿಕೆಹಾಕಿದ್ದಾನೆ ಎಂದು ನಟ ದಿಲೀಪ್ ಮತ್ತು ನಿರ್ದೇಶಕ ನಾದಿರ್‌ಶಾ ಪೋಲಿಸರಿಗೆ ದೂರು ನೀಡಿದ್ದಾರೆ.

ಲೋಕನಾಥ್‌ಬೆಹ್ರಾ ಕೇರಳದಲ್ಲಿ ಡಿಜಿಪಿ ಆಗಿದ್ದಾಗ ದಿಲೀಪ್ ಮತ್ತು ನಾದಿರ್ ಶಾ ಅಮೆರಿಕಕ್ಕೆ ಹೋಗುವ ಮೊದಲು ದೂರು ನೀಡಿದ್ದರು.

ನಟಿ ಪ್ರಕರಣದಲ್ಲಿ ಶಾಮೀಲುಗೊಳಿಸುತ್ತೇವೆ. ಒಂದೂವರೆ ಕೋಟಿ ರೂಪಾಯಿ ಕೊಡಬೇಕೆಂದು ಬ್ಲ್ಯಾಕ್‌ ಮೇಲ್‌ ಮಾಡಿರುವುದಾಗಿ ದಿಲೀಪ್ ಮತ್ತು ನಾದಿರ್ ಶಾ ದೂರಿನಲ್ಲಿ ತಿಳಿಸಿದ್ದಾರೆ. ಫೋನ್ ಸಂಭಾಷಣೆಯ ಆಡಿಯೊ ಕ್ಲಿಪ್‌ನ್ನು ಕೂಡಾ ನೀಡಿದ್ದಾರೆ.

ಫಲ್ಸರ್ ಸುನಿಯ ಸಹಕೈದಿ ಇಡಪ್ಪಳ್ಳೀ ವಿಷ್ಣು ಎಂದು ಪರಿಚಯಿಸಿದ ವ್ಯಕ್ತಿ ಫೋನ್ ಮಾಡಿದ್ದೆಂದು ನಾದಿರ್ ಶಾ ಹೇಳಿದ್ದಾರೆ. ದಿಲೀಪ್‌ರ ಚಾಲಕ ಮತ್ತು ನಾದಿರ್‌ಶಾರಿಗೆ ಫೋನ್ ಕರೆಮಾಡಿ,ಒಂದೂವರೆ ಕೋಟಿ ರೂಪಾಯಿ ನೀಡಿಲ್ಲದಿದ್ದರೆ ದಿಲೀಪ್‌ರ ಹೆಸರನ್ನುಹೇಳುತ್ತೇನೆ ಎಂದು ವಿಷ್ಣು ಹೇಳಿದ್ದಾನೆ. ದಿಲೀಪ್ ಹೆಸರು ಹೇಳಲುತನಗೆ ಎರಡೂವರೆ ಕೋಟಿ ರೂಪಾಯಿ ವರೆಗೆ ಹಣ ನೀಡುವವರು ಇದ್ದಾರೆ ಎಂದು ವಿಷ್ಣು ತಿಳಿಸಿದ್ದಾನೆ.

ದಿಲೀಪ್‌ರನ್ನುಕೇಸಿನಲ್ಲಿಸಿಕ್ಕಿಸಿಹಾಕಲು ಕೆಲವು ಸಿನೆಮಾನಟರು ಪ್ರಯತ್ನಿಸುತ್ತಿದ್ದಾರೆ ಎಂದು ಫೋನ್ ಮಾಡಿದಾತ ಹೇಳಿದ್ದಾನೆ. ನಟಿಯರ ಹೆಸರು ಕೂಡಾ ಇದೆ. ಆದರೆ ನಾವು ಅದನ್ನು ನಂಬಿಲ್ಲ. ಆತನ ಉದ್ದೇಶವೇನೆಂದು ಗೊತ್ತಿಲ್ಲ. ಇನ್ನಾದರೂ ಸತ್ಯಸ್ಥಿತಿ ಬಹಿರಂಗವಾಗಲಿ ಎಂದು ನಾದಿರ್ ಶಾ ಹೇಳಿದ್ದಾರೆ.

ತನ್ನನ್ನು ನಾಶಮಾಡಲು ಪ್ರಯತ್ನಿಸುವ ಕೆಲವರು ಬೆದರಿಕೆಯ ಹಿಂದಿದ್ದಾರೆ ಎಂದು ನಟ ದಿಲೀಪ್ ಪ್ರತಿಕ್ರಿಯಿಸಿದ್ದಾರೆ. ಕಮ್ಮಾರಸಂಭವಂ ಎನ್ನುವ ಸಿನೆಮಾದ ಶೂಟಿಂಗ್‌ನಲ್ಲಿ ದಿಲೀಪ್ ಈಗ ತೇನಿ ಎಂಬಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News