ಕೆನಡಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಸಿಖ್ ಮಹಿಳೆ ಪರ್ಬಿಂದರ್ ಕೌರ್
Update: 2017-06-24 16:32 IST
ಹೊಸದಿಲ್ಲಿ, ಜೂ.24: ಕೆನಡಾ ಸುಪ್ರೀಂ ಕೋರ್ಟ್ ನ ಪ್ರಪ್ರಥಮ ಪೇಟಧಾರಿಣಿ ಸಿಖ್ ಮಹಿಳಾ ನ್ಯಾಯಾಧೀಶರಾಗಿ ಭಾರತೀಯ ಮೂಲದ ಬ್ರಿಟಿಷ್ ಕೊಲಂಬಿಯ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶೆ ಪರ್ಬಿಂದರ್ ಕೌರ್ ಶೇರ್ ಗಿಲ್ ಆಯ್ಕೆಯಾಗಿದ್ದಾರೆ.
ಜಸ್ಟೀಸ್ ಇ.ಎ. ಅರ್ನಾಲ್ಡ್ ಬೇಲಿಯವರು ಮೇ 31ರಂದು ನಿವೃತ್ತರಾಗಿದ್ದು, ಈ ಹಿನ್ನೆಲೆಯಲ್ಲಿ ಪರ್ಬಿಂದರ್ ಕೌರ್ ರನ್ನು ನೂತನ ನ್ಯಾಯಾಧೀಶರಾಗಿ ನೇಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆನಡಾದ ವಿಶ್ವ ಸಿಖ್ ಒಕ್ಕೂಟ ಶೇರ್ ಗಿಲ್ ರನ್ನು ಅಭಿನಂದಿಸಿದೆ.
ಕೆನಡಾದಲ್ಲಿ ಮಾನವ ಹಕ್ಕು ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಪ್ರಸಿದ್ಧರಾಗಿರುವ ಪರ್ಮಿಂದರ್ ಕೆನಡಾದಲ್ಲಿರುವ ಸಿಖ್ ಸಮುದಾಯದ ಹಿತಾಸಕ್ತಿಯ ಹಲವು ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು.