ಮನೆ ಬಾಗಿಲಿಗೆ ಬರಲಿದೆ ಪೆಟ್ರೋಲ್
Update: 2017-06-24 16:47 IST
ತೃಶೂರ್,ಜೂ. 24: ಕೇರಳದಲ್ಲಿ ಸಂಚಾರಿ ಪೆಟ್ರೋಲ್ ಬಂಕ್ ಆರಂಭಿಸಲು ರಿಲಯನ್ಸ್ ಗ್ರೂಪ್ ಅನುಮತಿ ಯಾಚಿಸಿದ್ದು, ಇದಕ್ಕಾಗಿ ಪೆಟ್ರೋಲಿಯಂ ಸಚಿವಾಲಯಕ್ಕೆ ಅರ್ಜಿ ಸಲ್ಲಿಸದ ತಕ್ಷಣ ಅನುಮತಿ ಸಿಗಬಹುದೆನ್ನುವ ನಿರೀಕ್ಷೆ ವ್ಯಕ್ತಪಡಿಸಿದೆ. ಪೆಟ್ರೋಲ್ ಡೀಸೆಲ್ ಮನೆಬಾಗಿಲಿಗೆ ತಲುಪಿಸುವ ಸಂಚಾರಿ ಬಂಕ್‌ಗಳು ಬೆಂಗಳೂರಿನಲ್ಲಿ ಆರಂಭವಾಗಿದೆ. 950 ಲೀಟರ್ ತುಂಬು ವ ಸಾಮರ್ಥ್ಯದ ಮೂರು ವಾಹನಗಳನ್ನು ಇದಕ್ಕಾಗಿ ಬಳಸಲಾಗುತ್ತಿದೆ.
ದೇಶದಲ್ಲಿ ಎಲ್ಲಾದರೂ ಇಂತಹ ವ್ಯವಸ್ಥೆ ಆರಂಭಿಸಿದರೆ ಎಲ್ಲ ರಾಜ್ಯಗಳಲ್ಲಿಯೂ ಅನುಮತಿ ನೀಡುವುದಾಗಿ ಸಚಿವಾಲಯ ತಿಳಿಸಿತ್ತು. ಬೆಂಗಳೂರಿನ ಸಂಚಾರಿ ಬಂಕ್‌ಗಳನ್ನು ತೋರಿಸಿ ರಿಲಯನ್ಸ್ ಅರ್ಜಿಸಲ್ಲಿಸಿದೆ. ಜುಲೈಯಲ್ಲಿ ಅನುಮತಿ ಸಿಗುವ ನಿರೀಕ್ಷೆ ಇದೆ. ಇದಕ್ಕಾಗಿ ರಿಲಯನ್ಸ್ 20 ಸಂಚಾರಿ ಬಂಕ್‌ಗಳನ್ನು ಸಿದ್ಧಪಡಿಸಿದೆ.