ಸೋಲಿಸುವುದಕ್ಕಾಗಿಯೇ ಬಿಹಾರದ ಪುತ್ರಿಯನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ: ನಿತೀಶ್‌ಕುಮಾರ್
Update: 2017-06-24 17:00 IST
ಪಾಟ್ನ,ಜೂ. 24: ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ರಾಮ್‌ನಾಥ್ ಕೋವಿಂದ್‌ಗೆ ಬೆಂಬಲ ನೀಡುವ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದು ಜೆಡಿಯು ನಾಯಕ , ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಹೇಳಿದ್ದಾರೆ. ಪ್ರತಿಪಕ್ಷ ಬಿಹಾರದ ಪುತ್ರಿಯನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದು ಸೋಲುವುದಕ್ಕಾಗಿದೆ ಎಂದು ಅವರು ಹೇಳಿದ್ದಾರೆ. ಆರ್‌ಜೆಡಿ ಆಯೋಜಿಸಿದ್ದ ಇಫ್ತಾರ್‌ನಲ್ಲಿ ಲಾಲುಪ್ರಸಾದ್ ಯಾದವ್‌ರೊಂದಿಗೆ ನಡೆಸಿದ ಭೇಟಿಯಲ್ಲಿ ತನ್ನ ನಿರ್ಧಾರವನ್ನು ಅವರು ತಿಳಿಸಿದ್ದಾರೆ.
ರಾಮನಾಥ್ ಕೋವಿಂದ್‌ರನ್ನು ಬೆಂಬಲಿಸುವುದಾಗಿ ನಿತೀಶ್ ಆರಂಭದಿಂದಲೇ ಹೇಳುತ್ತಾ ಬಂದಿದ್ದಾರೆ. ಪ್ರತಿಪಕ್ಷ ಮಾಜಿ ಲೋಕಸಭಾ ಸ್ಪೀಕರ್ ಮೀರಾಕುಮಾರ್‌ರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಿದ್ದರಿಂದ ನಿತೀಶ್ ಕುಮಾರ್ ತೀರ್ಮಾನ ಬದಲಾಯಿಸಬಹುದೆಂದು ಭಾವಿಸಲಾಗಿತ್ತು. ಆದರೆ ನಿತೀಶ್ ತನ್ನ ಪಟ್ಟು ಸಡಿಸಿಲ್ಲ.