ತ್ರಿರಾಷ್ಟ್ರ ಪ್ರವಾಸ: ಪೋರ್ಚುಗಲ್ ತಲುಪಿದ ಪ್ರಧಾನಿ ಮೋದಿ

Update: 2017-06-24 14:32 GMT

ಲಿಸ್ಬನ್,ಜೂ.24: ಪ್ರಧಾನಿ ನರೇಂದ್ರ ಮೋದಿಯವರು ತನ್ನ ನಾಲ್ಕು ದಿನಗಳ ತ್ರಿರಾಷ್ಟ್ರ ಪ್ರವಾಸದ ಮೊದಲ ಹಂತದಲ್ಲಿ ಇಂದು ಪೋರ್ಚುಗಲ್ ರಾಜಧಾನಿ ಲಿಸ್ಬನ್‌ಗೆ ಆಗಮಿಸಿ ದರು. ಅವರು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಗಾಢಗೊಳಿಸುವ ನಿಟ್ಟಿನಲ್ಲಿ ಪೋರ್ಚುಗಲ್ ಪ್ರಧಾನಿ ಆ್ಯಂಟೋನಿಯೊ ಕೋಸ್ಟಾ ಅವರೊಂದಿಗೆ ಮಾತುಕತೆಗಳನ್ನು ನಡೆಸಲಿದ್ದಾರೆ.

ವಿದೇಶಾಂಗ ಸಚಿವ ಆಗಸ್ಟೊ ಸ್ಯಾಂಟೊಸ್ ಸಿಲ್ವಾ ಅವರು ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಮೋದಿಯವರನ್ನು ಬರಮಾಡಿಕೊಂಡರು.

ಕೋಸ್ಟಾ ಜೊತೆ ತನ್ನ ಭೇಟಿ ಸಂದರ್ಭ ತಮ್ಮಿಬ್ಬರ ನಡುವಿನ ಇತ್ತೀಚಿನ ಚರ್ಚೆಗಳನ್ನು ಮುಂದುವರಿಸಲಾಗುವುದು ಮತ್ತು ವಿವಿಧ ಜಂಟಿ ಉಪಕ್ರಮಗಳು ಹಾಗೂ ನಿರ್ಧಾರಗಳ ಪ್ರಗತಿಯನ್ನು ಪುನರ್‌ಪರಿಶೀಲಿಸಲಾಗುವುದು ಎಂದು ಮೋದಿ ಲಿಸ್ಬನ್‌ಗೆ ಪ್ರಯಾಣ ಆರಂಭಿಸುವ ಮುನ್ನ ಹೇಳಿದ್ದರು.

ತನ್ನ ಭಾರತ ಭೇಟಿ ಸಂದರ್ಭ ಉಭಯ ರಾಷ್ಟ್ರಗಳ ನಡುವೆ ಮಾಡಿಕೊಂಡಿದ್ದ ಒಪ್ಪಂದ ಗಳ ಅನುಷ್ಠಾನದ ಪುನರ್‌ಪರಿಶೀಲನೆ ಮತು ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಇದು ಅತ್ಯುತ್ತಮ ಅವಕಾಶವಾಗಿದೆ ಎಂದು ಮೋದಿ ಭೇಟಿ ಕುರಿತು ಟ್ವೀಟಿಸಿರುವ ಕೋಸ್ಟಾ ತಿಳಿಸಿದ್ದಾರೆ.

ಅಮೆರಿಕ ಭೇಟಿ ಮೋದಿಯವರ ತ್ರಿರಾಷ್ಟ್ರ ಪ್ರವಾಸದ ಮುಖ್ಯ ಘಟ್ಟವಾಗಲಿದೆ. ಅವರು ಜೂ.26ರಂದು ವಾಷಿಂಗ್ಟನ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಥಮ ಬಾರಿಗೆ ಭೇಟಿಯಾಗಲಿದ್ದಾರೆ.

ಟ್ರಂಪ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳಲ್ಲದೆ ಕೆಲವು ಪ್ರತಿಷ್ಠಿತ ಅಮೆರಿಕನ್ ಸಿಇಒಗಳನ್ನೂ ಮೋದಿ ಭೇಟಿಯಾಗಲಿದ್ದಾರೆ.

ಅಮೆರಿಕ ಭೇಟಿಯ ಬಳಿಕ ಮೋದಿ ಜೂ.27ರಂದು ನೆದರಲ್ಯಾಂಡ್ಸ್‌ಗೆ ಪ್ರಯಾಣಿಸ ಲಿದ್ದಾರೆ. ಅಲ್ಲಿ ಅವರು ಪ್ರಧಾನಿ ಮಾರ್ಕ್ ರುಟ್ಟೆ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ದೊರೆ ವಿಲಿಯಂ-ಅಲೆಕ್ಸಾಂಡರ್ ಮತ್ತು ರಾಣಿ ಮ್ಯಾಕ್ಸಿಮಾ ಅವರನ್ನೂ ಮೋದಿ ಭೇಟಿಯಾಗಲಿದ್ದಾರೆ. ಈ ವರ್ಷ ಉಭಯ ರಾಷ್ಟ್ರಗಳು ಭಾರತ-ಡಚ್ ರಾಜತಾಂತ್ರಿಕ ಸಂಬಂಧಗಳ 70ನೇ ವರ್ಷವನ್ನು ಆಚರಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News