ಅತ್ಯಾಚಾರ ವಿರೋಧಿಸಿದ ಯುವತಿಯನ್ನು ಆಟೋದಿಂದ ಹೊರಗೆಸೆದರು

Update: 2017-06-24 16:19 GMT

ಲಕ್ನೋ, ಜೂ. 24: ಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸಿದ ಯುವತಿಯೋರ್ವಳನ್ನು ಆಟೋ ರಿಕ್ಷಾದಲ್ಲಿದ್ದ ಅಪರಿಚಿತ ದುಷ್ಕರ್ಮಿಗಳು ಲಕ್ನೋದ ಮೇಡಿಯಾನ್ ಪ್ರದೇಶದಲ್ಲಿ ಹೊರಗೆಸೆದಿದ್ದು, ಗಂಭೀರ ಗಾಯಗೊಂಡ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

 ಮೃತಪಟ್ಟ ಯುವತಿಯನ್ನು 19 ಹರೆಯದ ಕಾಜಲ್ ಅಥವಾ ಪೂಜಾ ಎಂದು ಗುರುತಿಸಲಾಗಿದೆ. ಅವರು ಮೊದಲ ವರ್ಷದ ಪದವಿ ವಿದ್ಯಾರ್ಥಿನಿ. ದುಬ್ಬಾಗ್‌ನಿಂದ ಅಪರಿಚಿತ ಪ್ರಯಾಣಿಕರೊಂದಿಗೆ ಬಾಡಿಗೆ ಹಂಚಿಕೊಂಡು ರಾತ್ರಿ 9 ಗಂಟೆ ಸಮಯಕ್ಕೆ ಐಐಎಂ ರಸ್ತೆಯ ಆಮ್ರಪಾಲಿಯಲ್ಲಿರುವ ತನ್ನ ನಿವಾಸಕ್ಕೆ ಹಿಂದಿರುಗುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.

ಕುಟುಂಬ ಸಾಲದ ಸಮಸ್ಯೆಗೆ ಸಿಲುಕಿದ ಹಿನ್ನೆಲೆಯಲ್ಲಿ ಆಕೆ ರಾಜಾಜಿಪುರಂ ಫ್ಯಾಮಿಲಿ ಬಜಾರ್‌ನಲ್ಲಿ 15 ದಿನಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲಸ ಮುಗಿಸಿ ಆಟೋ ರಿಕ್ಷಾದಲ್ಲಿ ಮನಗೆ ಹಿಂದಿರುಗುತ್ತಿದ್ದರು.

 ಪ್ರಕರಣಕ್ಕೆ ಸಂಬಂಧಿಸಿ ಸೋನು ಸಹೋದರರನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನು ಬಂಧಿಸಿದ ಬಳಿಕ ಪ್ರಕರಣದ ಇತರ ದುಷ್ಕರ್ಮಿಗಳ ಗುರುತು ಪತ್ತೆ ಮಾಡಲಾಗುವುದು ಎಂದು ಎಸ್‌ಎಸ್‌ಪಿ ದೀಪಕ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News