×
Ad

ಅಫ್ಘಾನಿಸ್ತಾನದಲ್ಲಿ ಭಾರತ ನಿರ್ಮಿತ ಡ್ಯಾಂನ ಚೆಕ್ ಪೋಸ್ಟ್ ಮೇಲೆ ಉಗ್ರರ ದಾಳಿ: ಹತ್ತು ಪೊಲೀಸರು ಹತ

Update: 2017-06-25 17:12 IST

ಕಾಬೂಲ್, ಜೂ.25: ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ಭಾರತ ಸರಕಾರದಿಂದ ನಿರ್ಮಿಸಲ್ಪಟ್ಟಿರುವ ಸಲ್ಮಾ ಡ್ಯಾಂನ ಚೆಕ್ ಪೋಸ್ಟ್ ಮೇಲೆ ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ಕನಿಷ್ಠ 10 ಮಂದಿ ಪೊಲೀಸರು ಹತರಾಗಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ.

 ಚಶ್ತ್ ಜಿಲ್ಲೆಯಲ್ಲಿ ಸಲ್ಮಾ ಡ್ಯಾಂನ ಚೆಕ್ ಪೋಸ್ಟ್ ಮೇಲೆ ತಾಲಿಬಾನ್ ಉಗ್ರರ ಗುಂಪು ಶನಿವಾರ ರಾತ್ರಿ ದಾಳಿ ನಡೆಸಿದ್ದು, ಘಟನೆಯಲ್ಲಿ ಅಫ್ಘಾನಿಸ್ತಾನದ 10 ಪೊಲೀಸರು ಸಾವನ್ನಪ್ಪಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ 2016ರ ಜೂನ್‌ನಲ್ಲಿ ಜಂಟಿಯಾಗಿ ಸಲ್ಮಾ ಜಲಾಶಯವನ್ನು ಉದ್ಘಾಟಿಸಿದ್ದರು. ಯುದ್ದದಿಂದ ಜರ್ಝರಿತವಾಗಿದ್ದ ಅಫ್ಘಾನಿಸ್ತಾನದ ಮೂಲಸೌಕರ್ಯದ ಭಾಗವಾಗಿ ಭಾರತ 1,700 ಕೋ.ರೂ.ವೆಚ್ಚದ ಯೋಜನೆಯಲ್ಲಿ ಡ್ಯಾಂನ್ನು ನಿರ್ಮಿಸಿತ್ತು. ಈ ಡ್ಯಾಂ ಭಾರತ-ಅಫ್ಘಾನ್‌ನ ಸ್ನೇಹದ ಸಂಕೇತವಾಗಿತ್ತು. ಹೆರಾತ್ ಪಟ್ಟಣದಿಂದ 165 ಕಿ.ಮೀ.ದೂರದಲ್ಲಿರುವ ಚಿಸ್ಟ್-ಇ-ಶರೀಫ್ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಜಲಾಶಯ 75,000 ಹೆಕ್ಟರ್ ಭೂಮಿಗೆ ನೀರೊದಿಗಿಸುತ್ತಿದ್ದು, 42 ಮೇಗಾ ವ್ಯಾಟ್ ವಿದ್ಯುತ್‌ನ್ನು ತಯಾರಿಸಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News