×
Ad

ವಿಶ್ವ ಹಾಕಿ ಲೀಗ್ ಸೆಮಿಫೈನಲ್: ಭಾರತಕ್ಕೆ ಆರನೆ ಸ್ಥಾನ

Update: 2017-06-25 19:15 IST

ಹೊಸದಿಲ್ಲಿ, ಜೂ.25: ಹಾಕಿ ವಿಶ್ವ ಲೀಗ್ ಸೆಮಿಫೈನಲ್ಸ್ ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ ಕೆನಡಾ ತಂಡದ ವಿರುದ್ಧ ಸೋತಿರುವ ಭಾರತ ಆರನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಐದು ಹಾಗೂ ಆರನೆ ಸ್ಥಾನಕ್ಕಾಗಿ ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ 3-2 ಅಂತರದಿಂದ ಜಯಭೇರಿ ಬಾರಿಸಿರುವ ಕೆನಡಾ ಐದನೆ ಸ್ಥಾನ ಪಡೆದುಕೊಂಡಿತು. ಈ ಮೂಲಕ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಪುರುಷರ ಹಾಕಿ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದೆ.

ಕೆನಡಾದ ಪರ ಗೊರ್ಡನ್ ಜಾನ್‌ಸ್ಟನ್(3,44ನೆ ನಿಮಿಷ) ಹಾಗೂ ಕೆಗಾನ್ ಪೆರೇರ(40ನೆ ನಿಮಿಷ) ಗೋಲು ಬಾರಿಸಿದರು. ಕೆನಡಾದ ಗೋಲ್‌ಕೀಪರ್ ಆ್ಯಂಟೊನಿ ಕಿಂಡ್ಲ್ ವೀರೋಚಿತ ಪ್ರದರ್ಶನದಿಂದ ಭಾರತಕ್ಕೆ ಹಲವು ಬಾರಿ ಗೋಲು ನಿರಾಕರಿಸಿದರು.

ಭಾರತದ ಪರ ಹರ್ಮನ್‌ಪ್ರೀತ್ ಸಿಂಗ್(7ನೆ ಹಾಗೂ 22ನೆ ನಿಮಿಷ) ಅವಳಿ ಗೋಲು ಬಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News