ಮಹಾರಾಷ್ಟ್ರದಲ್ಲಿ ಭಾರೀ ವರ್ಷಧಾರೆ
Update: 2017-06-25 21:00 IST
ಮುಂಬೈ, ಜೂ.25: ಸುಮಾರು 15 ದಿನಗಳ ಬಳಿಕ ನೈರುತ್ಯ ಮಾನ್ಸೂನ್ ಮಹಾರಾಷ್ಟ್ರದ ಕರಾವಳಿಯುದ್ದಕ್ಕೂ ಬಿರುಸುಗೊಂಡಿದ್ದು, ಮುಂಬೈ ಹಾಗೂ ಕೊಂಕಣ ವಲಯದಲ್ಲಿ ಭಾರೀ ವರ್ಷಧಾರೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಪಾಲ್ಘರ್ ಜಿಲ್ಲೆಯ ಡಹಾಣುವಿನಲ್ಲಿ 124.7 ಮಿ.ಮೀ. ಮಳೆಯಾಗಿದೆ. ಇದು ರಾಜ್ಯದಲ್ಲಿ ದಾಖಲಾದ ಅತ್ಯಧಿಕ ಮಳೆ ಪ್ರಮಾಣವಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ಉಳಿದ ಭಾಗಗಳಾದ ಮಧ್ಯ ಮಹಾರಾಷ್ಟ್ರ, ಮರಾಠವಾಡ ಹಾಗೂ ವಿದರ್ಭಗಳಲ್ಲಿ ಉತ್ತಮ ಮಳೆ ನಿರೀಕ್ಷಿಸಲಾಗುತ್ತಿದೆ.
ಭಾರೀ ಮಳೆಗೆ ವಾಣಿಜ್ಯ ನಗರಿ ಮುಂಬೈ ನಗರ ಜಲಾವೃತವಾಗಿದೆ. ಗುಜರಾತ್‌ನಲ್ಲಿ ವರ್ಷಧಾರೆಯಾಗಿ ಜಲಪ್ರಳಯವಾಗಿದೆ.