ರೈಲ್ವೆಯಲ್ಲಿ ಇನ್ನು ಜಾನುವಾರುಗಳಿಗೆ ಪ್ರತ್ಯೇಕ ಕೋಚ್

Update: 2017-06-26 11:35 GMT

ತಿರುವನಂತಪುರಂ,ಜೂ. 26: ಜಾನುವಾರು ಸಾಗಾಟಕ್ಕೆ ರೈಲ್ವೆ ವಿಶೇಷ ಬೋಗಿಯನ್ನು ರೂಪಿಸುತ್ತಿದೆ. ದಕ್ಷಿಣ-ಪೂರ್ವ ರಾಜ್ಯಗಳಿಗೆ ಹೋಗುವ ರೈಲುಗಳಲ್ಲಿ ಈ ವಿಶೇಷ ಬೋಗಿಗಳನ್ನು ನಿರ್ಮಿಸಲಾಗುತ್ತಿದೆ. ಜಾನುವಾರು ಸಾಗಾಟ ಮಾರಾಟಗಳಿಗೆ ಕೇಂದ್ರಸರಕಾರ ನಿಯಂತ್ರಣ ವಿಧಿಸಿದ ಹಿನ್ನೆಲೆಯಲ್ಲಿ ರೈಲ್ವೆ ಹೊಸ ವ್ಯವಸ್ಥೆಗೆ ಮುಂದಾಗಿದೆ. ಸಾಮಾನ್ಯ ರೈಲುಗಳಲ್ಲಿ ಜಾನುವಾರುಗಳಿಗೆ ಬೋಗಿಯನ್ನು ನಿರ್ಮಿಸಲಾಗುತ್ತಿದೆ.

ಈಗ ಗಾರ್ಡ್‌ರೂಮ್‌ನಲ್ಲಿರುವ ಕೆನಲ್ ಬಾಕ್ಸ್‌ನಲ್ಲಿ ಜಾನುವಾರು ಸಾಗಾಟ ನಡೆಯುತ್ತಿದೆ. ಬ್ರಿಟಿಷ್ ಅಧಿಕಾರಿಗಳು ಸಾಕು ನಾಯಿಗಳನ್ನು ಕೊಂಡು ಹೋಗಲು ಕೆನಲ್ ಬಾಕ್ಸ್‌ಗಳನ್ನು ರೂಪಿಸಿದ್ದರು. ನಂತರ ಈವ್ಯವಸ್ಥೆಯನ್ನು ಮುಂದುವರಿಸಲಾಗಿದ್ದು,ಪ್ರತ್ಯೇಕ ಶುಲ್ಕ ತೆತ್ತು ಸಾಕು ನಾಯಿ, ಆಡುಗಳ ಸಾಗಾಟಕ್ಕೆ ಅದನ್ನು ಬಳಸಲಾಗುತ್ತಿತ್ತು. ಕೇವಲ ಒಂದು ಜಾನುವಾರನ್ನು ಮಾತ್ರ ಈ ರೀತಿಯಲ್ಲಿ ಸಾಗಾಟ ಮಾಡಲು ಸಾಧ್ಯವಾಗುತ್ತಿತ್ತು.

ಈಗ ರೈಲ್ವೆ ಜಾರಿಗೆ ತರಲು ನಿರ್ಧರಿಸಿದ ವಿಶೇಷ ಬೋಗಿಯಿಂದಾಗಿ ಜಾನುವಾರುಗಳನ್ನು ಸಾಗಿಸಲು ವಾಹನಗಳಲ್ಲಿ ಸಾಗಿಸುವುದಕ್ಕಿಂತ ಸುರಕ್ಷಿತ ಮತ್ತು ಸೌಕರ್ಯದಾಯಕವಾಗಲಿದೆ. ಜಾನುವಾರುಗಳನ್ನು ಗೂಡ್ಸ್ ರೈಲುಗಳಲ್ಲಿ ಸಾಗಿಸಲು ಕಾನೂನಾತ್ಮಕವಾದ ನಿಷೇಧವಿದೆ. ಇವೆಲ್ಲವನ್ನು ಪರಿಗಣಿಸಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಜಾನುವಾರು ಸಾಗಾಟಕ್ಕೆ ಬೋಗಿಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News