ಕೇರಳ ಬಿಜೆಪಿ ಅಧ್ಯಕ್ಷರಿಗೆ ಮೂವರು ಸಲಹೆಗಾರರ ನೇಮಕ

Update: 2017-06-26 11:51 GMT

ತಿರುವನಂತಪುರಂ,ಜೂ. 26: ಬಿಜೆಪಿ ಕೇರಳ ಅಧ್ಯಕ್ಷ ಕುಮ್ಮನಂ ರಾಜಶೇಖರನ್‌ರಿಗೆ ಮೂವರು ಸಲಹೆಗಾರರನ್ನು ನೇಮಿಸಲಾಗಿದೆ. ಇನ್ನು ಕೂಡಾ ನೇಮಕಾತಿ ನಡೆಯುವ ಸೂಚನೆಗಳಿವೆ.

ಕೇರಳದಲ್ಲಿ ಕೇವಲ ಒಂದೇ ಶಾಸಕರನ್ನು ಹೊಂದಿರುವ ಪಕ್ಷದರಾಜ್ಯ ಅಧ್ಯಕ್ಷರು ಪಕ್ಷದ ಖರ್ಚಿನಲ್ಲಿ ಯಾಕೆ ಇಷ್ಟು ಸಲಹೆಗಾರರನ್ನು ನೇಮಿಸಿದ್ದಾರೆನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ನೇಮಕಾತಿ ಬಗ್ಗೆ ಕೇರಳ ಬಿಜೆಪಿಯಲ್ಲಿಯೇ ಅಸಹಮತ ವ್ಯಕ್ತವಾಗಿದೆ.

ಪಾಕ್ಟ್ ಇದರ ಚೇರ್‌ಮೆನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಡಾ. ಜಿ.ಸಿ. ಗೋಪಾಲ ಪಿಳ್ಳೆಯನ್ನು ಆರ್ಥಿಕ ಸಲಹೆಗಾರರಾಗಿ ನೇಮಿಸಲಾಗಿದೆ. ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಕೇರಳದಲ್ಲಿ ಜಾರಿಗೊಳಿಸುವುದಕ್ಕಾಗಿ ಜನ್ಮಭೂಮಿ ಮುಖ್ಯ ಸಂಪಾದಕರಾಗಿದ್ದ ಹರಿ ಎಸ್. ಕರ್ತೆಯವರನ್ನು ಮಾಧ್ಯಮ ಸಲಹೆಗಾರರನ್ನಾಗಿ ಮತ್ತು ಕಾಲೇಜು ಅಧ್ಯಾಪಕರಾಗಿದ್ದ ಡಾ. ಕೆ. ಆರ್ ರಾಧಕೃಷ್ಣ ಪಿಳ್ಳೆಯವರನ್ನು ಅಭಿವೃದ್ಧಿ ಮತ್ತು ಯೋಜನೆ ಸಲಹೆಗಾರರನ್ನಾಗಿ ನೇಮಕಗೊಳಿಸಲಾಗಿದೆ.

ಕೇಂದ್ರ ನೇತೃತ್ವದ ಸೂಚನೆಯಂತೆ ಈ ನೇಮಕಾತಿ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸಲಹೆಗಾರರನ್ನು ನೇಮಕಗೊಳಿಸಲಾಗುವುದು. ಕೇಂದ್ರಸರಕಾರದ ಯೋಜನೆಗಳನ್ನು ಜಾರಿಗೊಳಿಸುವುದಕ್ಕಾಗಿ ರಾಜ್ಯದಲ್ಲಿ ಸೃಷ್ಟಿಯಾಗಬಹುದಾದ ವಿವಾದಗಳನ್ನು ತಡೆಯಲಿಕ್ಕಾಗಿ ವಿಷಯಗಳನ್ನು ಅಧ್ಯಯನ ನಡೆಸಿ ರಾಜ್ಯ ನೇತೃತ್ವಕ್ಕೆ ಸಲಹೆ ನೀಡುವುದಕ್ಕಾಗಿ ಸಲಹೆಗಾರರನ್ನು ನೇಮಕಗೊಳಿಸಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಸಲಹೆಗಾರರಿಗೆ ವೇತನ ನೀಡಲಾಗುವುದು ಎನ್ನಲಾಗಿದೆ. ಆದರೆ ಇವರಿಗೆ ಪಕ್ಷದ ನಿಧಿಯಿಂದ ವೇತನ ನೀಡುವ ಬಗ್ಗೆ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News