ಅಸಹಿಷ್ಣುತೆ ಸೃಷ್ಟಿಯ ಪ್ರಯತ್ನಗಳ ನಡುವೆ ಜನರು ಒಗ್ಗಟ್ಟಿನಿಂದಿರಬೇಕು: ಮಮತಾ ಬ್ಯಾನರ್ಜಿ

Update: 2017-06-26 12:23 GMT

ಕೋಲ್ಕತಾ,ಜೂ.26: ದೇಶದಲ್ಲಿಂದು ಅಸಹಿಷ್ಣುತೆಯ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸೋಮವಾರ ತನ್ನ ಈದುಲ್ ಫಿತ್ರ್ ಸಂದೇಶದಲ್ಲಿ ಹೇಳಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಒಗ್ಗಟ್ಟಿ ನಿಂದಿರುವಂತೆ ಜನರನ್ನು ಒತ್ತಾಯಿಸಿದ್ದಾರೆ. ಜನರಲ್ಲಿ ಒಡಕನ್ನು ಸೃಷ್ಟಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

 ಯಾವುದೇ ವ್ಯಕ್ತಿ ಧೈರ್ಯ ಮತ್ತು ದೃಢನಿರ್ಧಾರವನ್ನು ತೋರಿಸಬೇಕಾದ ಸಂದರ್ಭ ಗಳು ಬರುತ್ತಿರುತ್ತವೆ. ಅಸಹಿಷ್ಣುತೆಯ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಗಳು ನಡೆಯುತ್ತಿವೆ. ನಾವು ಒಗ್ಗಟ್ಟಿನಿಂದಿದ್ದೇವೆ. ನಾವು ಎಲ್ಲರಿಗಾಗಿದ್ದೇವೆ. ನಾವು ಮೊದಲು ಮನುಷ್ಯರು,ಬಳಿಕ ಹಿಂದು,ಮುಸ್ಲಿಂ ಅಥವಾ ಕ್ರೈಸ್ತರು. ನಾವು ಬದುಕಿರುವವರೆಗೂ ಮಾನವತೆಯ ರಕ್ಷಣೆಗೆ ಹೋರಾಡುತ್ತೇವೆ ಎಂದಿರುವ ಅವರು, ಸೌಹಾರ್ದತೆಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News