ಇನ್ಫೋಸಿಸ್‌ನಲ್ಲಿ ಕೆಲಸ ಕಳೆದು ಕೊಂಡವರ ಸಂಖ್ಯೆಯೆಷ್ಟು ಗೊತ್ತೇ?
ಬೆಂಗಳೂರು,ಜೂ. 26: ಅಟೋಮೇಶನ್‌ನ ಕಾರಣದಿಂದ ಇನ್ಫೋಸಿಸ್‌ನಲ್ಲಿ 11, 000 ಮಂದಿ ಕೆಲಸ ಕಳಕೊಂಡಿದ್ದಾರೆ ಎಂದು ವಾರ್ಷಿಕ ಮಹಾಸಭೆಯ ವರದಿಯಲ್ಲಿದೆ. ಅಟೋಮೇಶನ್ ಸಹಿತ ಕ್ರಮಗಳ ಮೂಲಕ ವರಮಾನ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಸ್ಥಾಪಕ ಸದಸ್ಯರೊಂದಿಗೆ ಡೈರೆಕ್ಟರ್ ಬೋರ್ಡ್‌ಗೆ ಯಾವುದೇ ಭಿನ್ನಮತ ಇಲ್ಲ. ಅಂತಹ ಪ್ರಚಾರ ಮಾಧ್ಯಮ ಸೃಷ್ಟಿಯಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಕಂಪೆನಿಯ 36ನೆ ಮಹಾಸಭೆಯ ವರದಿಯಲ್ಲಿ ಈವಿವರಗಳಿವೆ.
ಪ್ರತಿಫಲ ಪಡೆಯುವ ವಿಷಯದಲ್ಲಿ ಕಂಪೆನಿಯ ಉನ್ನತ ಅಧಿಕಾರಿಗಳು ಮತ್ತು ಸಾಮಾನ್ಯ ಉದ್ಯೋಗಿಗಳ ನಡುವೆ ಇರುವ ಅಂತರವನ್ನು ಕಡಿಮೆಗೊಳಿಸಲು ಕಂಪೆನಿ ಕ್ರಮ ಕೈಗೊಳ್ಳಲಿದೆ. ಉನ್ನತ ಸ್ಥಾನದಲ್ಲಿರುವವರಿಗೆ ದೊಡ್ಡ ಮೊತ್ತದ ಸಂಬಳ ನೀಡುವ ಬಗ್ಗೆ ಇನ್ಫೋಸಿಸ್‌ನ ಸ್ಥಾಪಕ ಚೇರ್‌ಮೆನ್ ನಾರಾಯಣ ಮೂರ್ತಿ ವಿರೋಧ ವ್ಯಕ್ತಪಡಿಸಿದ್ದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿಕಂಪೆನಿಯ ಶೇರುಗಳ ಮಾಲಕರಿಗೆ ಡಿವಿಡೆಂಟ್ ಆಗಿ 13,000ಕೋಟಿ ರೂಪಾಯಿ ನೀಡಲಾಗುವುದು. ಲಾಭದಲ್ಲಿ ಪಾಲು, ಶೇರುಗಳನ್ನು ಮರಳಿ ಪಡೆದು ಇಷ್ಟು ಮೊತ್ತನೀಡಲಾಗುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಶೇರು ಮಾಲಕರಿಗೆ ಶೇರು ಒಂದಕ್ಕೆ ತಲಾ 14.75 ರೂಪಾಯಿಯಂತೆ ಡಿವಿಡೆಂಟ್ ನೀಡಲಾಗಿತ್ತು. ಸುಮಾರು 4,061ಕೋಟಿ ರೂಪಾಯಿ ಕಂಪೆನಿ ಈ ರೀತಿ ಶೇರುದಾರರಿಗೆ ನೀಡಿದೆ.
ಮಾರ್ಚ್ 31ರ ಲೆಕ್ಕ ಪರಿಶೋಧನೆ ಪ್ರಕಾರ ಕಂಪೆನಿ ವರಮಾನ 12, 222 ಕೋಟಿ ರೂಪಾಯಿ ಆಗಿದೆ. 2016 ಮಾರ್ಚ್‌ನಲ್ಲಿ ಇದು 24,276ಕೋಟಿ ರೂಪಾಯಿ ಆಗಿತ್ತು. ವಿವಿಧ ಸಂಸ್ಥೆಗಳಲ್ಲಿ ಈ ವರ್ಷ ಕಂಪೆನಿ ಠೇವಣಿ 6,931ಕೋಟಿ ರೂಪಾಯಿ ಇದೆ. ಇದು ಕಳೆದ ಮಾರ್ಚ್‌ನಲ್ಲಿ 4,900ಕೋಟಿ ಆಗಿತ್ತು.
ಬಹಳಷ್ಟು ಸವಾಲುಗಳನ್ನು ಎದುರಿಸುತ್ತಿದೆಯಾದರೂ ಈ ಆರ್ಥಿಕ ವರ್ಷದಲ್ಲಿ ಕಂಪೆನಿ ಬೆಳವಣಿಗೆಯಾಗಲಿದೆ ಎನ್ನುವ ನಿರೀಕ್ಷೆಯನ್ನು ಸಿಇಒ ವಿಶಾಲ್ ಝಿಕ ಶೇರುದಾರರೊಂದಿಗೆಹಂಚಿಕೊಂಡಿದ್ದಾರೆ.