×
Ad

ಚೆಕ್ ಅಮಾನ್ಯ ಪ್ರಕರಣಗಳ ಕಠಿಣ ನಿರ್ವಹಣೆ ಅಗತ್ಯ: ದಿಲ್ಲಿ ನ್ಯಾಯಾಲಯ

Update: 2017-06-26 19:33 IST

ಹೊಸದಿಲ್ಲಿ,ಜೂ.26: ಚೆಕ್ ಅಮಾನ್ಯ ಪ್ರಕರಣಗಳು ನ್ಯಾಯಾಲಯಗಳ ಕಲಾಪಗಳಿಗೆ ಅನಗತ್ಯ ಅಡಚಣೆಗಳನ್ನು ಮಾಡುತ್ತವೆ ಮತ್ತು ಅವುಗಳನ್ನು ಕಠಿಣವಾಗಿ ನಿರ್ವಹಿಸುವ ಅಗತ್ಯವಿದೆ ಎಂದು ಇಲ್ಲಿಯ ಮಹಾನಗರ ನ್ಯಾಯಾಲಯವು ಹೇಳಿದೆ.

ಚೆಕ್ ಅಮಾನ್ಯ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ನ್ಯಾ.ಅಶೋಕ್ ಕುಮಾರ್ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

 ಅಮಾನ್ಯ ಚೆಕ್‌ಗಳಿಂದಾಗಿ ಚೆಕ್‌ಗಳ ಮೇಲಿನ ಜನರ ವಿಶ್ವಾಸಾರ್ಹತೆಯೇ ನಶಿಸು ತ್ತಿದೆ ಎಂದ ಅವರು, ಅಮಾನ್ಯ ಚೆಕ್ ಪ್ರಕರಣಗಳು ನ್ಯಾಯಾಲಯಗಳ ಸಮಯವನ್ನು ತಿಂದು ಹಾಕುತ್ತಿವೆ, ಜೊತೆಗೆ ನ್ಯಾಯಾಲಯಗಳ ಕಾರ್ಯಸೂಚಿಗೂ ಅಡ್ಡಿಯನ್ನುಂಟು ಮಾಡುತ್ತವೆ. ಇಂತಹ ಪ್ರಕರಣಗಳನ್ನು ಕಠಿಣವಾಗಿ ನಿರ್ವಹಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News