ಕಲ್ಲಡ್ಕ ಪ್ರಭಾಕರ್ ಭಟ್, ಶರಣ್ ಪಂಪ್ ವೆಲ್ ಬಂಧಿಸಿ: ಎಸ್ ಡಿ ಪಿ ಐ

Update: 2017-06-26 18:42 GMT

ಮಂಗಳೂರು, ಜೂ. 26: ಬೆಂಜನಪದವಿನಲ್ಲಿ ಜೂ.21 ರಂದು ಎಸ್ ಡಿ ಪಿ ಐ ಅಮ್ಮುಂಜೆ ವಲಯಾಧ್ಯಕ್ಷ ಆಶ್ರಫ್ ಕಲಾಯಿಯವರ ಹತ್ಯೆಗೈದ ಸಂಘಪರಿವಾರದ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರೂ ಇನ್ನೊಬ್ಬ ಆರೋಪಿ ಭರತ್ ಕುಮ್ಡೇಲ್ ತಲೆಮರೆಸಿಕೊಂಡಿದ್ದಾನೆ. ಇವನನ್ನೆ ಹತ್ಯೆಯ ಮಾಸ್ಟರ್ ಮೈಂಡ್ ಎಂದು ಬಿಂಬಿಸಲಾಗುತ್ತಿದೆ, ಪೊಲೀಸರು ಕೂಡ ಅದಕ್ಕೆ ಪೂರಕವಾಗಿ ಭರತೇ ಪ್ರಮುಖ ಆರೋಪಿ ಎಂದು ಕತೆ ಕಟ್ಟಿರುತ್ತಾರೆ ಎಂದು ಎಸ್ ಡಿ ಪಿ ಐ ದ.ಕ. ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಭರತ್ ಕುಮ್ಡೇಲ್ ಗಿಂತ ಆಶ್ರಫ್ ಹತ್ಯೆಯ ಮಾಸ್ಟರ್ ಮೈಂಡ್ ಗಳು ಪ್ರಭಾಕರ್ ಭಟ್ ಮತ್ತು ಶರಣ್ ಪಂಪ್ ವೆಲ್ ಈ ಇಬ್ಬರು ಪ್ರಮುಖ ರೂವಾರಿಗಳನ್ನು ರಕ್ಷಿಸುವಂತಹ ಕೆಲಸ ನಡೆಯುತ್ತಿದೆ.

ಕಳೆದ ಬಾರಿ ಕಲ್ಲಡ್ಕ ಗಲಭೆಯ  ಸಂದರ್ಭ ಪತ್ರಿಕಾಗೋಷ್ಟಿ ನಡೆಸಿದ ಪ್ರಭಾಕರ ಭಟ್ ನೊಂದಿಗೆ ಶರಣ್ ಪಂಪ್ ವೆಲ್ ಮತ್ತು ಭರತ್ ಕುಮ್ಡೇಲ್ ಜೊತೆಗಿದ್ದರು ಇದರಿಂದ ಅಶ್ರಫ್ ಹತ್ಯೆಯ ರೂಪು ರೇಷೆಗಳು ಇವರಿಂದಲೆ ನಡೆದಿದೆ ಎಂಬುದರಲ್ಲಿ ಸಂಶಯವಿಲ್ಲ. ಹಲವು ಬಾರಿ ಸಮಾಲೋಚನೆಗಳನ್ನು ನಡೆಸಿ ಜಿಲ್ಲಾದ್ಯಂತ ಕೊಮು ಗಲಭೆಯನ್ನು ಸೃಷ್ಟಿಸುವ ಉದ್ದೇಶದಿಂದ ಇವರು ನಡೆಸಿರುವ ಕೃತ್ಯವಾಗಿದೆ.

ಸಾರ್ವಜನಿಕ ವಲಯಗಳಲ್ಲಿ ಇವರದ್ದೆ ಹೆಸರುಗಳು ಕೇಳಿ ಬರುತ್ತಿದ್ದರು, ಪೊಲೀಸ್ ಇಲಾಖೆ ಯಾರ ಒತ್ತಡಕ್ಕೆ ಮಣಿಯುತ್ತಿದ್ದಾರೆ ಎಂಬುದು ಪಶ್ನೆಯಾಗಿಯೇ ಉಳಿದಿದೆ. ಸರಕಾರವು ಕೂಡ ಇದರ ಬಗ್ಗೆ ಮೌನವಹಿಸಿದೆ. ಒಂದು ಕಡೆ  ಆಹಾರ ಸಚಿವರು ಕಲ್ಲಡ್ಕ ಪ್ರಭಾಕರ ಭಟ್ ಅಶ್ರಫ್ ಹತೈಯ ಪ್ರಮುಖ ರೂವಾರಿ ಎಂಬ ಹೇಳಿಕೆ ನೀಡುತ್ತಿದ್ದರೂ ಇವರದೇ ಸರಕಾರಕ್ಕೆ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಲು ಸಾಧ್ಯವಾಗದೆ ಇರುವುದು ದುರಂತವಾಗಿದೆ. ಆದುದರಿಂದ ಸರಕಾರ ಮತ್ತು ಪೊಲೀಸ್ ಇಲಾಖೆ ಕೂಡಲೇ ಕಲ್ಲಡ್ಕ ಗಲಭೆಯಿಂದ ಹಿಡಿದು ಅಶ್ರಫ್ ಹತ್ಯೆಯವರೆಗಿನ ಎಲ್ಲಾ ಘಟನೆಗಳ ಪ್ರಮುಖ ರೂವಾರಿಗಳಾದ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್ ವೆಲ್ ನನ್ನು ಬಂಧಿಸಿ ತನಿಖೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಎಸ್ ಡಿ ಪಿ ಐ ಆಗ್ರಹಿಸುತ್ತದೆ. ಇಲ್ಲದಿದ್ದಲ್ಲಿ ಜಿಲ್ಲಾದ್ಯಂತ ಹೋರಾಟ ನಡೆಸಲಾಗು ವುದೆಂದು ಎಸ್ ಡಿ ಪಿ ಐ ದ.ಕ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News