×
Ad

ಸಾಂಕ್ರಾಮಿಕ ಜ್ವರ: ಕೇರಳಾದ್ಯಂತ ಸ್ವಚ್ಛತಾಕಾರ್ಯ ಆರಂಭ

Update: 2017-06-27 13:13 IST

ತಿರುವನಂತಪುರಂ,ಜೂ. 27: ಸಾಂಕ್ರಾಮಿಕ ಜ್ವರವನ್ನು ತಡೆಯುವ ನಿಟ್ಟಿನಲ್ಲಿ ಕೇರಳದಾದ್ಯಂತ ರಾಜ್ಯಮಟ್ಟದ ಸ್ವಚ್ಛತಾಕಾರ್ಯ ಇಂದು ಆರಂಭವಾಗಿದೆ. ಮೂರುದಿವಸಗಳ ಶುಚೀಕರಣ ಯಜ್ಞ ಇದಾಗಿದ್ದು, ಜೂ. 27,28,29 ತಾರೀಕುಗಳಲ್ಲಿ ರಾಜ್ಯವಿಡೀ ವಾರ್ಡ್ ಮಟ್ಟದಲ್ಲಿ ಶುಚೀಕರಣ ನಡೆಯಲಿದೆ. ಜೂ.30ಕ್ಕೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಹಾಗೂ ಡ್ರೈ ಡೇ ಆಚರಣೆ ನಡೆಯಲಿದೆ.

 ಪ್ರತಿ ಜಿಲ್ಲೆಗಳ ಶುಚೀಕರಣ ಚಟುವಟಿಕೆಗಳ ಮೇಲ್ನೋಟವನ್ನು ಒಬ್ಬೊಬ್ಬ ಸಚಿವರು ನೋಡಿಕೊಳ್ಳಲಿದ್ದಾರೆ. ಶಾಸಕರು ಕೂಡಾ ಇದರಲ್ಲಿ ಪಾಲ್ಗೊಳ್ಳುವರು. ಈ ಕಾರ್ಯಕ್ಕೆ ಸಹಕರಿಸುವುದಾಗಿ ಪ್ರತಿಪಕ್ಷವೂ ಹೇಳಿದೆ. ಕಣ್ಣೂರ್ ಕಾರ್ಪೊರೇಷನ್ ಶುಚೀಕರಣ ಚಟುವಟಿಕೆಗಳಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News