ಮುಸ್ಲಿಂ ವಿರೋಧಿ ಚಿಂತನಾಗತಿಯ ಮಾನಸಿಕ ರೋಗಿಗಳ ಸಂಗಮ: ಟ್ರಂಪ್- ಮೋದಿ ಭೇಟಿಯನ್ನು ಟೀಕಿಸಿದ ಶೀಲಾ ದೀಕ್ಷಿತ್

Update: 2017-06-27 11:18 GMT

ಹೊಸದಿಲ್ಲಿ,ಜೂ. 27: ಭಾರತದ ಪ್ರಧಾನಿ ನರೇಂದ್ರ ಮೋದಿಯ ಅಮೆರಿಕನ್ ಸಂದರ್ಶನವನ್ನುಕಾಂಗ್ರೆಸ್ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಮುಸ್ಲಿಂ ವಿರೋಧಿ ಚಿಂತನಾಗತಿಯ ಇಬ್ಬರು ಮಾನಸಿಕ ರೋಗಿಗಳ ಸಂಗಮ ಎಂದು ದಿಲ್ಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕಿ ಶೀಲಾದೀಕ್ಷಿತ್ ಮೋದಿ ಹಾಗೂ ಟ್ರಂಪ್ ಭೇಟಿಯನ್ನು ಟೀಕಿಸಿದ್ದಾರೆ. “ದೇವರು ಅಮೆರಿಕವನ್ನುಮತ್ತು ನನ್ನ ದೇಶವನ್ನು ರಕ್ಷಿಸಲಿ” ಎಂದು ಶೀಲಾ ದೀಕ್ಷಿತ್ ಟ್ವೀಟ್ ಮಾಡಿದ್ದಾರೆ.

ಮೋದಿಯ ಅಮೆರಿಕ ಸಂದರ್ಶನದಿಂದ ವಿಶೇಷ ಲಾಭವೇನೂ ಆಗಿಲ್ಲ ಎಂದು ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಹೇಳಿದರು. ಮೋದಿ,ಟ್ರಂಪ್‌ಜಂಟಿ ಹೇಳಿಕೆಯಲ್ಲಿ ಹೊಸದಾದುದು ಏನೂ ಇಲ್ಲವೆಂದು ತಿವಾರಿ ಹೇಳಿದರು.

ಭಯೋತ್ಪಾದನೆಯನ್ನು ಒಗ್ಗೂಡಿ ಪ್ರತಿರೋಧಿಸುತ್ತೇವೆ ಎಂದು ಮೋದಿ ಮತ್ತು ಟ್ರಂಪ್ ಜಂಟಿ ಹೇಳಿಕೆಯಲ್ಲಿ ಹೇಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News