ಇಂಟರ್ನೆಟ್ ನಲ್ಲಿ ಲೀಕ್ ಆದ ಅನ್ಯಗ್ರಹ ಜೀವಿಗಳ ವೀಡಿಯೋ ವೈರಲ್: ನಾಸಾ ಹೇಳಿದ್ದೇನು ಗೊತ್ತೇ ?

Update: 2017-06-27 12:13 GMT

ವಾಷಿಂಗ್ಟನ್,ಜೂ. 27: ಅನ್ಯಗ್ರಹಗಳಲ್ಲಿ ಜೀವಿಗಳ ಕುರಿತು ಹೊಸ ವಿಚಾರಗಳೇನೂ ಇಲ್ಲ. ಹಾಗೂ ಅನ್ಯಗ್ರಹಗಳಲ್ಲಿ ಜೀವಿಗಳಿವೆ ಎಂಬುದಕ್ಕೆ ಈವರೆಗೂ ಯಾವ ಸಾಕ್ಷ್ಯವೂ ಲಭಿಸಿಲ್ಲ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.

“ಅನ್ಯಗ್ರಹಗಳಲ್ಲಿ ಜೀವಿಗಳಿವೆ ಎನ್ನುವುದಕ್ಕೆ ಪುರಾವೆ ಲಭಿಸಿದೆ. ಅದನ್ನು ಶೀಘ್ರದಲ್ಲಿ ಬಹಿರಂಗಗೊಳಿಸಲಿದೆ” ಎಂದು ಸುದ್ದಿ ಹರಡಿತ್ತು. ಆದ್ದರಿಂದ ನಾಸಾ ಸ್ಪಷ್ಟೀಕರಣ ನೀಡಿದೆ. ಭೂಮಿಯ ಹೊರಗೆ ಜೀವಿಗಳಿವೆ ಎನ್ನುವುದಕ್ಕೆ ಈವರೆಗೆ ಯಾವ ಪುರಾವೆಯೂ ಸಿಕ್ಕಿಲ್ಲ. ಆದರೆ ಅಂತಹ ಸಂಶೋಧನೆ ಮುಂದುವರಿದಿದೆ ಎಂದು ನಾಸಾ ಸಯನ್ಸ್ ಮಿಷನ್ ಡೈರೆಕ್ಟರೇಟ್‌ನಲ್ಲಿ ಅಡ್ಮಿಸ್ಟ್ರೇಟ್ ಆಗಿರುವ ಥಾಮಸ್ ಸರ್ಬುಕನ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ನಾಸಾದ ಕಂಪ್ಯೂಟರ್‌ನಿಂದ ಹ್ಯಾಕರ್‌ಗಳು ಸೋರಿಕೆ ಮಾಡಿರುವ ಅನ್ಯಗ್ರಹ ಜೀವಿಗಳ ವೀಡಿಯೊ ಎಂದು ಒಂದು ವೀಡಿಯೊ ಇಂಟರ್‌ನೆಟ್‌ನಲ್ಲಿ ಪ್ರಸಾರವಾಗಿತ್ತು.

ಸುಮಾರು 12 ನಿಮಿಷದ ವೀಡಿಯೊವನ್ನು ಕೋಟ್ಯಂತರ ಜನರು ನೋಡಿದ್ದಾರೆ. ಹೀಗಾಗಿ ನಾಸಾ ಸ್ಪಷ್ಟೀಕರಣ ನೀಡಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News