×
Ad

ಗುಲ್ಬರ್ಗಾ ಹತ್ಯಾಕಾಂಡ: ವಿಎಚ್‌ಪಿ ನಾಯಕನಿಗೆ ಜಾಮೀನು

Update: 2017-06-27 20:16 IST

ಅಹ್ಮದಾಬಾದ್, ಜೂ. 27: ಗುಲ್ಬರ್ಗಾ ಸೊಸೈಟಿ ಹತ್ಯಾಕಾಂಡದ ಅಪರಾಧಿ ವಿಎಚ್‌ಪಿಯ ನಾಯಕ ಅತುಲ್ ವೈದ್ಯನಿಗೆ ಗುಜರಾತ್ ಉಚ್ಚ ನ್ಯಾಯಾಲಯ ಜಾಮೀನು ನೀಡಿದೆ.

ಅಹ್ಮದಾಬಾದ್‌ನಲ್ಲಿ 69 ಜನರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವೈದ್ಯನಿಗೆ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಈ ತೀರ್ಪು ಪ್ರಶ್ನಿಸಿ ವೈದ್ಯ ಮೇಲ್ಮನವಿ ಸಲ್ಲಿಸಿದ್ದಾನೆ. ಹಾಗೂ ಈಗಾಗಲೇ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಆದುದರಿಂದ ಸಾಮಾನ್ಯ ಜಾಮೀನು ನೀಡಲಾಗಿದೆ ಎಂದು ಉಚ್ಚ ನ್ಯಾಯಾಲಯ ಹೇಳಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ 2016ರಲ್ಲಿ ವಿಶೇಷ ಸಿಟ್ ನ್ಯಾಯಾಲಯ 23 ಮಂದಿಯನ್ನು ಅಪರಾಧಿಗಳು ಎಂದು ಪರಿಗಣಿಸಿ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಸಾಮಾನ್ಯ ಜಾಮೀನು ಪಡೆಯುತ್ತಿರುವ ಮೊದಲ ಅಪರಾಧಿ ವೈದ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News