ಮಕ್ಕಳು ಕಾಯಿಲೆ ಬಗ್ಗೆ ಮಾತ್ರ ಕೇಳುತ್ತಿದ್ದರು. ನನ್ನ ಕನಸುಗಳು ಅವರಿಗೆ ಬೇಕಿರಲಿಲ್ಲ : ಅಬ್ದುಲ್ ಖಾದರ್

Update: 2017-06-28 05:55 GMT

ನನಗೆ ವಯಸ್ಸಾಗುತ್ತಿದೆ ಎಂದು ಎಲ್ಲರೂ ನನಗೆ ಪ್ರತಿ ದಿನ ನೆನಪಿಸುತ್ತಿದ್ದರು. ನನ್ನ ಮಕ್ಕಳು ಎಲ್ಲರಿಗಿಂತ ಹೆಚ್ಚಾಗಿ ನೆನಪಿಸುತ್ತಿದ್ದರು. ವಯಸ್ಸಾದ ಜನರಿಗೆ ಹಣದ ಅಗತ್ಯವಿಲ್ಲ ಎಂದು ಅವರು ಯಾವತ್ತೂ ನನಗೆ ಹೇಳುತ್ತಿದ್ದರು. ನನಗೆ ತಿನ್ನಲು ಆಹಾರ ಬೇಕು ಹಾಗೂ ಮಲಗಲು ಹಾಸಿಗೆ ಬೇಕು, ವಯಸ್ಸಾದವನ ಅಗತ್ಯಗಳು ಕೇವಲ ಇಷ್ಟೇ ಎಂದು ಕಳೆದ ಹಲವು ವರ್ಷಗಳಿಂದ ನಾನು ಕಲಿತಿದ್ದೇನೆ.

ಆದರೆ ವೃದ್ಧನೊಬ್ಬನಿಗೂ ಕೆಲವೊಂದು ಕನಸುಗಳಿರುತ್ತವೆ ಹಾಗೂ ಕೆಲವೊಂದು ಕೆಲಸಗಳನ್ನು ಮಾಡಲಿಕ್ಕಿದೆ ಎಂದು ಯಾರೂ ಯಾವತ್ತೂ ಯೋಚಿಸಲಿಲ್ಲ. ನನ್ನ ಆರೋಗ್ಯ ಹಾಗೂ ಕಾಯಿಲೆಗಳ ಬಗ್ಗೆ ಮಾತನಾಡುವುದನ್ನು ಬಿಟ್ಟರೆ ಜನರು ನನ್ನ ಬಳಿ ಬೇರೇನನ್ನೂ ಕೇಳುತ್ತಿರಲಿಲ್ಲ. ನ

ನಗೆ ಸ್ವಲ್ಪವೇ ಸಮಯ ಉಳಿದಿದೆ ಎಂದು ನನ್ನ ಮಕ್ಕಳು ಕೂಡ ಅಂದುಕೊಂಡಿದ್ದರು. ಆದರೆ ಸಾಯುವ ಮುಂಚೆ ನನಗೆ ಮಾಡಲು ಹಲವಾರು ಕೆಲಸಗಳಿವೆ. ನನ್ನ ಮನೆಯಂಗಳದಲ್ಲಿ ಹೆಚ್ಚು ಮರಗಳನ್ನು ಬೆಳಸೆಬೇಕೆಂದು ನಾನು ಯಾವತ್ತೂ ಬಯಸಿದ್ದೆ. ನನ್ನ ಮೊಮ್ಮಗನಿಗೆ ಕೊಡುವುದಾಗಿ ಹೇಳಿದ್ದ ಫುಟ್ಬಾಲ್ ಖರೀದಿಸುವ ಬಯಕೆ ಇತ್ತು. ನನ್ನ ಅನಾರೋಗ್ಯಪೀಡಿತ ಪತ್ನಿಯೊಡನೆ ನಗರದಲ್ಲಿ ಕೆಲ ಕಾಲ ಕಳೆಯಬೇಕೆಂಬುದು ನನ್ನ ಆಸೆ.

ನಿರುಪಯೋಗಿ ವೃದ್ಧನಾಗಿರದೇ ಇರಲು ನಾನು ನಿರ್ಧರಿಸಿದೆ. ಕೆಲ ತಿಂಗಳುಗಳ ಹಿಂದೆ ನಾನು ನೌಕರಿ ಹುಡುಕಲು ಆರಂಭಿಸಿದೆ. ಎಲ್ಲರೂ ನನ್ನ ಮಾತುಗಳನ್ನು ಆಲಿಸಿದರು, ನನಗೆ ಗೌರವ ತೋರಿಸಿದರು ಹಾಗೂ ನಂತರ ನನಗೆ ಮನೆಗೆ ಹೋಗಲು ಹೇಳಿದರಲ್ಲದೆ ಕೆಲಸ ಮಾಡುವ ವಯಸ್ಸು ನನ್ನದಲ್ಲ ಎಂಬ ಸಲಹೆಯನ್ನೂ ನೀಡಿದರು.

ಆದರೆ ನಾನು ಭರವಸೆ ಕಳೆದುಕೊಳ್ಳದೆ 75ರ ಹರೆಯದಲ್ಲೂ ಕೆಲಸ ಹುಡುಕುವುದನ್ನು ಮುಂದುವರಿಸಿದರೆ. ನಾನು ಶಫೀಖ್ ಆಂಗಡಿಗೆ ಹೋದಾಗ ಆತ ಟಿವಿ ರಿಪೇರಿ ಮಾಡುತ್ತಿದ್ದ. ನಾನು ಕೆಲಸ ಹುಡುಕುತ್ತಿದ್ದೇನೆಂದು ಆತನಿಗೆ ಹೇಳಿದೆ.

ಆತ ತನ್ನ ಕುರ್ಚಿಯ ಧೂಳನ್ನು ಒರೆಸಿ ನನಗೆ ಕುಳಿತುಕೊಳ್ಳಲು ಹೇಳಿದ. ಇತರರು ಹೇಳಿದಂತೆಯೇ ಈತ ಕೂಡ ಹೇಳುತ್ತಾನೆಂದು ನನಗೆ ಖಚಿತವಾಗಿತ್ತು. ಆದರೆ ಆತ ನನಗೆ ಸ್ವಲ್ಪ ಹಣ ನೀಡಬಲ್ಲೆ ಎಂದು ಹೇಳಿದ ಹಾಗೂ ಆತನ ಕ್ಯಾಶ್ ಡ್ರಾಯರ್ ನಿರ್ವಹಣೆ ಮಾಡಬೇಕು ಹಾಗೂ ಬಾಕಿ ಬರಬೇಕಾದ ಮೊತ್ತಗಳ ವಿಚಾರದಲ್ಲಿ ಕೆಲಸ ಮಾಡಬೇಕೆಂದು ಹೇಳಿದ. ನನಗೆ ಆಶ್ಚರ್ಯವಾಯಿತು. ನನ್ನ ಹೃದಯ ಜೋರಾಗಿ ಬಡಿದುಕೊಳ್ಳುತ್ತಿತ್ತು.

 ನಾನು ಆ ಕೆಲಸ ಮಾಡಬಲ್ಲೆನೆಂದು ಆತನಿಗೆ ನಿಜವಾಗಿಯೂ ಅನಿಸಿದೆಯೇ ಎಂದು ಕೇಳಿ ಬಿಟ್ಟೆ. ರಸ್ತೆಗಳಲ್ಲಿ ಬೆಳೆದು ಆತ ಈ ಅಂಗಡಿ ಸ್ಥಾಪಿಸಬಹುದಾಗಿದ್ದರೆ, ನಾನು ಕೂಡ ನನ್ನ ಕನಸುಗಳನ್ನು ನಿಜ ಮಾಡಬಲ್ಲೆ ಎಂದು ಆತ ಹೇಳಿದ. ನಾನು ಉದ್ಯೋಗಕ್ಕೆ ಸೇರಿ ಒಂದು ತಿಂಗಳಾಗಿದೆ ಹಾಗೂ ನನಗೆ ನನ್ನ ಮೊದಲ ಸಂಬಳ ದೊರೆತಿದೆ. ನಾನು ನನ್ನ ಮನೆಯಂಗಳದಲ್ಲಿ ಹಲವಾರು ಗಿಡಗಳನ್ನು ನೆಟ್ಟೆ. ಪ್ರತಿ ದಿನ ಮಾರುಕಟ್ಟೆಗೆ ಹೋಗಿ ನನ್ನ ಮೊಮ್ಮಕ್ಕಳಿಗೆ ಹಾಗೂ ಮರಿಮೊಮ್ಮಕ್ಕಳಿಗೆ ಇಷ್ಟವಾದ ವಸ್ತುಗಳನ್ನು ಖರೀದಿಸುತ್ತಿದ್ದೆ. ಈ ದಿನಗಳಲ್ಲಿ ಎಲ್ಲಾ ವಸ್ತುಗಳು ದುಬಾರಿಯಾಗಿರುವುದರಿಂದ ನಾನು ನಿಧಾನಾಗಿ ಖರೀದಿಸುತ್ತೇನೆ. ಶೀಘ್ರದಲ್ಲಿಯೇ ನನ್ನ ಪತ್ನಿಯನ್ನೂ ಭೇಟಿ ಮಾಡುತ್ತೇನೆ. ಆದರೆ ನೌಕರಿ ಮಾಡುವ ನನ್ನ ನಿರ್ಧಾರದಿಂದ ನನ್ನ ಮಕ್ಕಳು ಖುಷಿಯಾಗಿಲ್ಲ. ಆದರೆ ನಾನು ಖುಷಿಯಾಗಿರುವುದನ್ನು ಅವರು ನೋಡಿದಾಗ ಅವರು ನನ್ನ ಮೇಲೆ ಕೋಪಿಸಲಾರರು ಎಂದು ಅಂದುಕೊಂಡಿದ್ದೇನೆ.

ಈಗ ಪ್ರತಿ ದಿನ ನಾನು ಈ ಹಿಂದೆ ನನಸಾಗಿಸಲು ಸಾಧ್ಯವಾಗಿರದ ಕನಸನ್ನು ಕಾಣಲು ಕಾತುರನಾಗಿರುತ್ತೇನೆ.

- ಅಬ್ದುಲ್ ಖಾದರ್

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News