ಹೀನ ಮಾನವ ಸಾಗಾಟಗಾರರ ಅಮೆರಿಕದ ಪಟ್ಟಿಯಲ್ಲಿ ಚೀನಾ

Update: 2017-06-28 14:11 GMT

ವಾಶಿಂಗ್ಟನ್, ಜೂ. 28: ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಸಿದ್ಧಪಡಿಸಿದ ಪ್ರಪಂಚದ ಅತ್ಯಂತ ಹೀನ ಮಾನವ ಸಾಗಾಟಗಾರರ ಪಟ್ಟಿಯಲ್ಲಿ ಸುಡಾನ್ ಮತ್ತು ಉತ್ತರ ಕೊರಿಯ ದೇಶಗಳ ಜೊತೆಗೆ ಚೀನಾವನ್ನೂ ಸೇರಿಸಲಾಗಿದೆ.

ಮಾನವ ಸಾಗಾಟವನ್ನು ತಡೆಯಲು ಅಥವಾ ಅದರ ಸಂತ್ರಸ್ತರನ್ನು ರಕ್ಷಿಸಲು ಬೀಜಿಂಗ್ ಏನೂ ಮಾಡುತ್ತಿಲ್ಲ ಎಂದು ತನ್ನ ವಾರ್ಷಿಕ ‘ಮಾನವ ಸಾಗಾಟ ವರದಿ’ಯಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ.

ಪಶ್ಚಿಮ ಚೀನಾದಲ್ಲಿರುವ ಉಯಿಘರ್ ಮುಸ್ಲಿಮ್ ಅಲ್ಪಸಂಖ್ಯಾತರನ್ನು ಜೀತದಾಳುಗಳಾಗಿ ದುಡಿಯಲು ಬಲವಂತಪಡಿಸಲಾಗುತ್ತಿದೆ ಹಾಗೂ ಉತ್ತರ ಕೊರಿಯನ್ನರು ಮಾನವ ಸಾಗಾಟ ಮಾಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸದೆ ಬೀಜಿಂಗ್ ಅವರನ್ನು ಗುಂಪಿನಲ್ಲಿ ಸ್ವದೇಶಕ್ಕೆ ಕಳುಹಿಸುತ್ತಿದೆ ಎಂದು ವರದಿ ತಿಳಿಸಿದೆ.

‘‘ಮಾನವ ಸಾಗಾಟವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ರೂಪಿಸಲಾದ ಕನಿಷ್ಠ ಮಾನದಂಡಗಳನ್ನೂ ಬೀಜಿಂಗ್‌ಪೂರ್ಣವಾಗಿ ಈಡೇರಿಸುತ್ತಿಲ್ಲ’’ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News