×
Ad

ಶಿಕಾಗೊ: ಕರಿಯ ತರುಣನಿಗೆ 16 ಗುಂಡು ಹಾರಿಸಿ ಹತ್ಯೆ

Update: 2017-06-28 20:09 IST

ಶಿಕಾಗೊ (ಅಮೆರಿಕ), ಜೂ. 28: ಬಿಳಿಯ ಪೊಲೀಸ್ ಅಧಿಕಾರಿಯೊಬ್ಬರು ಕರಿಯ ತರುಣನೊಬ್ಬನಿಗೆ 16 ಬಾರಿ ಗುಂಡು ಹಾರಿಸಿದ ಘಟನೆಗೆ ಸಂಬಂಧಿಸಿ, ಸುಳ್ಳು ಹೇಳಿ ಪ್ರಕರಣವನ್ನು ಮುಚ್ಚಿ ಹಾಕಲು ಪಿತೂರಿ ನಡೆಸಿದ ಆರೋಪವನ್ನು ಶಿಕಾಗೊದ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಹೊರಿಸಲಾಗಿದೆ.

ಕೊನೆಗೂ ಘಟನೆಯ ವೀಡಿಯೊ ಹೊರಬಿದ್ದ ಬಳಿಕ ನಿಜ ಸಂಗತಿ ಹೊರಬಿದ್ದು, ಭಾರೀ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿತ್ತು.

2014 ಅಕ್ಟೋಬರ್ 20ರಂದು ಪೊಲೀಸ್ ಅಧಿಕಾರಿ ಜಾಸನ್ ವಾನ್ ಡೈಕ್ ಕರಿಯ ತರುಣ ಲ್ಯಾಕನ್ ಮೆಕ್‌ಡೊನಾಲ್ಡ್‌ರನ್ನು ಗುಂಡು ಹಾರಿಸಿ ಕೊಂದಿದ್ದರು.

ಆ ಘಟನೆಯ ಬಗ್ಗೆ ಓರ್ವ ಹಾಲಿ ಮತ್ತು ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳು ಸುಳ್ಳು ಹೇಳಿದ್ದಾರೆ ಎಂಬುದಾಗಿ ಮಂಗಳವಾರ ಸಲ್ಲಿಸಲಾದ ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿದೆ.

ಡೈಕ್‌ರ ವೌಖಿಕ ಆದೇಶಗಳನ್ನು ಕರಿಯ ತರುಣ ನಿರ್ಲಕ್ಷಿಸಿದನು ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾದನು ಎಂಬುದಾಗಿ ಈ ಅಧಿಕಾರಿಗಳು ಸುಳ್ಳು ಹೇಳಿದ್ದರು.

ಆದರೆ, ತನ್ನ ಮೇಲೆ ಬಿದ್ದ ಮೊದಲ ಗುಂಡಿಗೆ ಕರಿಯ ತರುಣನು ನೆಲದ ಮೇಲೆ ಬಿದ್ದು ಹೊರಳಾಡುವುದನ್ನು ಹಾಗೂ ಪೊಲೀಸ್ ಅಧಿಕಾರಿಯು ಒಂದರ ನಂತರ ಒಂದರಂತೆ ಆತನ ಮೇಲೆ ಗುಂಡು ಹಾರಿಸುವುದನ್ನು ಪೊಲೀಸರ ಡ್ಯಾಶ್‌ಕ್ಯಾಮ್ ವೀಡಿಯೊ ತೋರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News