×
Ad

ಜಿಜೆಎಂ ಬೆಂಬಲಿಗರಿಂದ ಜಿಟಿಎ ಕಚೇರಿಗೆ ಬೆಂಕಿ

Update: 2017-06-28 23:04 IST

ಡಾರ್ಜಿಲಿಂಗ್, ಜೂ. 28: ಪ್ರತ್ಯೇಕ ಗೂರ್ಖಾಲ್ಯಾಂಡ್‌ಗಾಗಿ ಗೂರ್ಖಾ ಜನಮುಕ್ತಿ ಮೋರ್ಚಾ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 14ನೇ ದಿನಕ್ಕೆ ಕಾಲಿರಿಸಿದ್ದು, ಬುಧವಾರ ಉದ್ರಿಕ್ತ ಪ್ರತಿಭಟನಕಾರರು ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತ (ಜಿಟಿಎ) ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಜಿಟಿಎಯ ಎಂಜಿನಿಯರಿಂಗ್ ವಿಭಾಗದ ಕಚೇರಿಗೆ ಜೂನ್ 27ರ ರಾತ್ರಿ ಬೆಂಕಿ ಹಚ್ಚಲಾಗಿದೆ. ಪ್ರತಿಭಟನಕಾರರು ಡಾರ್ಜಿಲಿಂಗ್‌ನಿಂದ 25 ಕಿ.ಮೀ. ದೂರದ ಬಿಜನ್‌ಬರಿಯಲ್ಲಿರುವ ಪಂಚಾಯತ್ ಕಚೇರಿಯಲ್ಲೂ ದಾಂಧಲೆ ನಡೆಸಿದ್ದಾರೆ.

ಈ ಪ್ರದೇಶದಲ್ಲಿ ಪೊಲೀಸರು ಹಾಗೂ ಭದ್ರತಾ ಪಡೆ ಬಿಗಿ ಬಂದೋಬಸ್ತ್ ಏರ್ಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News