×
Ad

ನಾರದ ಛದ್ಮ ಕಾರ್ಯಾಚರಣೆ ಪ್ರಕರಣ : ಸಿಬಿಐ ಎದುರು ಹಾಜರಾದ ಸಿಇಒ

Update: 2017-06-28 23:20 IST

ಕೋಲ್ಕತ್ತಾ, ಜೂ. 28: ನಾರದ ಛದ್ಮ ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಿಸಿ ನಾರದ ನ್ಯೂಸ್‌ನ ಸಿಇಒ ಮ್ಯಾಥ್ಯೂ ಸ್ಯಾಮುವೆಲ್ ಬುಧವಾರ ಕೋಲ್ಕತ್ತಾದಲ್ಲಿ ಸಿಬಿಐ ಮುಂದೆ ಹಾಜರಾದರು.

ಈ ಹಿಂದೆ ಮೇ 19ರ ಮುನ್ನ ಹಾಜರಾಗುವಂತೆ ಸಿಬಿಐ ಸ್ಯಾಮುವೆಲ್‌ಗೆ ಆದೇಶಿಸಿತ್ತು. ಆದರೆ, ಸ್ಯಾಮುವೆಲ್ ಹಾಜರಾಗಿರಲಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದಾಗಿ ಅವರು ತಿಳಿಸಿದ್ದರು.

ಭ್ರಷ್ಟಾಚಾರದ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ಈಗಾಗಲೇ ಸ್ಯಾಮುವೆಲ್ ಅನ್ನು ವಿಚಾರಣೆಗೆ ಒಳಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News