ಪೊಲೀಸ್ ಅಧಿಕಾರಿಯ ಕತ್ತು ಸೀಳಿ ಕೊಲೆ
Update: 2017-07-01 17:52 IST
ಬಿಜ್ನೋರ್,ಜು.1: ಉತ್ತರಪ್ರದೇಶದ ಬಿಜ್ನೋರ್‌ನಲ್ಲಿ ಪೊಲೀಸ್ ಅಧಿಕಾರಿಯ ಕೊರಳಿಗೆ ಇರಿದು ಕೊಲೆ ಮಾಡಲಾಗಿದೆ. ಮಂಡಾವರ್ ಪೊಲೀಸ್‌ಠಾಣೆಯ ಇನ್ಸ್‌ಪೆಕ್ಟರ್ ಸಹ್ರೋಜ್ ಸಿಂಗ್‌ರು ದುಷ್ಕರ್ಮಿಗಳಿಂದ ಕೊಲೆಯಾಗಿದ್ದಾರೆ. ಶುಕ್ರವಾರ ಮಧ್ಯರಾತ್ರಿ ವೇಳೆ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಯ ಮೃತದೇಹ ದಾರಿಬದಿಯಲ್ಲಿ ಸಿಕ್ಕಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೊಲೆಪ್ರಕರಣವನ್ನು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಜಗತ್‌ರಾಜ್, ಎಸ್ಪಿ ಅತುಲ್ ಶರ್ಮಾ ಘಟನಾಸ್ಥಳವನ್ನು ಸಂದರ್ಶಿಸಿದ್ದು ದುಷ್ಕರ್ಮಿಗಳ ಪತ್ತೆಗೆ ವ್ಯಾಪಕ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.