ಫ್ರಾನ್ಸ್, ಬ್ರಿಟನ್ ಸಮುದ್ರದಲ್ಲಿ ಸರಕು ಹಡಗುಗಳ ಢಿಕ್ಕಿ
Update: 2017-07-01 20:58 IST
ಪ್ಯಾರಿಸ್, ಜು. 1: 38,000 ಟನ್ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ (ಹಡಗು) ಮತ್ತು 220 ಮೀಟರ್ ಉದ್ದದ ಸರಕು ಹಡಗುಗಳು ಫ್ರಾನ್ಸ್ ಮತ್ತು ಬ್ರಿಟನ್ ನಡುವಿನ ಸಮುದ್ರದಲ್ಲಿ ಶನಿವಾರ ಢಿಕ್ಕಿಯಾಗಿವೆ.
ಆದಾಗ್ಯೂ, ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಹಾಗೂ ಯಾವುದೇ ಸೋರಿಕೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
‘‘ಎರಡೂ ಹಡಗುಗಳಿಗೆ ಹಾನಿಯಾಗಿವೆಯಾದರೂ, ನೀರು ಒಳಗೆ ಬರುತ್ತಿಲ್ಲ ಹಾಗೂ ಯಾವುದೇ ಮಾಲಿನ್ಯ ಉಂಟಾಗಿಲ್ಲ’’ ಎಂದು ಬ್ರಿಟನ್‌ನ ಸಮುದ್ರ ತೀರ ಮತ್ತು ತಟರಕ್ಷಣಾ ಸಂಸ್ಥೆ ಹೇಳಿದೆ.
ನಾವಿಕರ ರಕ್ಷಣೆಗೆ ಹೆಲಿಕಾಪ್ಟರ್ ಮತ್ತು ಜೀವರಕ್ಷಕ ದೋಣಿಗಳನ್ನು ಕಳುಹಿಸಲಾಗಿದೆ.
ಟ್ಯಾಂಕರ್‌ನಲ್ಲಿ 27 ನಾವಿಕರಿದ್ದರೆ, ಸರಕು ಹಡಗಿನಲ್ಲಿ 22 ನಾವಿಕರಿದ್ದಾರೆ. ನಾವಿಕರೆಲ್ಲರೂ ಭಾರತ ಮತ್ತು ಚೀನೀಯರು.