ಸಿಕ್ಕಿಂ ಬಿಕ್ಕಟ್ಟು: ಭಾರತ-ಚೀನ ಗಡಿ ಸಮಸ್ಯೆಗೆ ಚಾರಿತ್ರಿಕ ಒಪ್ಪಂದ ಕಾರಣ

Update: 2017-07-01 16:37 GMT

ಕೋಲ್ಕತ್ತಾ, ಜು. 1: ಟಿಬೆಟ್ ಹಾಗೂ ಸಿಕ್ಕಿಂ ನಡುವೆ ಗಡಿ ಗುರುತಿಸುವ ಒಪ್ಪಂದಕ್ಕೆ 1890 ಮಾರ್ಚ್ 17ರಂದು ಕೋಲ್ಕತ್ತಾದಲ್ಲಿ ಬ್ರಿಟಿಶ್ ಇಂಡಿಯಾ ಹಾಗೂ ಚೀನದ ಉನ್ನತ ಅಧಿಕಾರಿಗಳು ಸಹಿ ಹಾಕುವ ಸಂದರ್ಭ ಟಿಬೇಟನ್ ಅಥವಾ ಭೂತಾ್ನ ಪ್ರತಿನಿಧಿಗಳುಉಪಸ್ಥಿತಿ ಇದ್ದಿರಲಿಲ್ಲ.

ಸಿಕ್ಕಿಂ ಹಾಗೂ ಟಿಬೇಟ್ ಕುರಿತಂತೆ ಗ್ರೇಟ್ ಬ್ರಿಟನ್ ಹಾಗೂ ಚೀನದ ನಡುವಿನ ಸಮಾವೇಶ ಎಂದು ಈ ಒಪ್ಪಂದವನ್ನು ಕರೆಯಲಾಗಿದೆ. ಸಿಕ್ಕಿಂ ಅನ್ನು ಬ್ರಿಟಿಶ್ ಇಂಡಿಯಾದೊಂದಿಗೆ ಸೇರಿಸಿಕೊಳ್ಳಲು ಈ ಒಪ್ಪಂದ ಬ್ರಿಟಿಶರಿಗೆ ದಾರಿ ಮಾಡಿಕೊಟ್ಟಿತು.

ಇದರಿಂದ ಟಿಬೆಟ್ ಹಾಗೂ ಸಿಕ್ಕಿಂ ನಡುವೆ ಗಡಿ ಗುರುತಿಸಲಾಯಿತು. ಆದರೆ, ಭಾರತ ಹಾಗೂ ಚೀನ ನಡುವಿನ 3,488 ಕಿ.ಮೀ. ಗಡಿ ವಿವಾದ ಪರಿಹಾರವಾಗಲೇ ಇಲ್ಲ.

ಈ ಒಪ್ಪಂದಕ್ಕೆ ಲಾರ್ಡ್ ಲ್ಯಾಂಡ್ಸ್‌ಓವ್ನೆ ಎಂದು ಕರೆಯಲಾಗುವ ಬ್ರಿಟಿಶ್ ವೈಸರಾಯಿ ಎಚ್‌ಸಿಕೆಪಿ ಫಿಟ್ಸ್‌ವೌರೈಸ್ ಹಾಗೂ ಟಿಬೆಟ್‌ನ ನಿವಾಸಿಯಾಗಿದ್ದ ಸಾಮ್ರಾಜ್ಯಶಾಹಿ ಸಹಾಯಕ ಲೆಫ್ಟಿನೆಟ್ ಗವನರ್‌ರ್ ಶೇಂಗ್ ತಾಯ್ ಸಹಿ ಹಾಕಿದ್ದರು.

ಸಿಕ್ಕಿಂನಲ್ಲಿರುವ ನಾಥುಲಾ ಸಮೀಪ ಸೇನಾ ಬಿಕ್ಕಟ್ಟಿಗೆ ಸಂಬಂಧಿಸಿ ಚೀನ ಸರಕಾರ ಈ ಉಲ್ಲೇಖ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News