ಜು.4ರಂದು ಹಜ್ ಯಾತ್ರಾರ್ಥಿಗಳಿಗೆ ಚುಚ್ಚುಮದ್ದು

Update: 2017-07-02 06:16 GMT

ಮಂಗಳೂರು, ಜು.2: ಪ್ರಸಕ್ತ ವರ್ಷ ಪವಿತ್ರ ಹಜ್‌ಯಾತ್ರೆ ಕೈಗೊಳ್ಳುವ ಯತ್ರಾರ್ಥಿಗಳಿಗೆ ಚುಚ್ಚುಮದ್ದು ಲಸಿಕೆ ಹಾಕುವ ಕಾರ್ಯಕ್ರಮ ಜು.4ರಂದು ಮಂಗಳೂರಿನ ಕೊಡಿಯಾಲಬೈಲಿನಲ್ಲಿರುವ ಯೆನೆಪೊಯ ಆಸ್ಪತ್ರೆಯಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 9:30ರಿಂದ ಸಂಜೆ 4ರವರೆಗೆ ನಡೆಯುವ ಈ ಲಸಿಕೆ ಕಾರ್ಯಕ್ರಮದ ಪ್ರಯೋಜನವನ್ನು ಹಜ್ ಯಾತ್ರಾರ್ಥಿಗಳು ಪಡೆದುಕೊಳ್ಳುವಂತೆ ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಯೆನೆಪೊಯ ಮುಹಮ್ಮದ್ ಕುಂಞಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News