×
Ad

ಬದುಕಲು ಬಿಡುವುದಿಲ್ಲವಾದರೆ, ಗೌರವದಿಂದ ಸಾಯಲಾದರೂ ಬಿಡಿ: ಗೋರಕ್ಷಕರ ವಿರುದ್ಧ ಕಿಡಿಕಾರಿದ ಸಚಿವ ಜಲೀಲ್

Update: 2017-07-02 12:59 IST

ಕ್ಯಾಲಿಕಟ್,ಜು. 2: ಬದುಕಲು ಬಿಡುವುದಿಲ್ಲವಾದರೆ ಗೌರವದಿಂದ ಸಾಯುವುದಕ್ಕಾದರೂ ಗೋರಕ್ಷಕರೆಂಬ ದುಷ್ಕರ್ಮಿಗಳು ಬಿಡಬೇಕು ಎಂದು ಕೇರಳದ ಸ್ಥಳೀಯಾಡಳಿತ ಸಚಿವ ಕೆ.ಟಿ.ಜಲೀಲ್ ಹೇಳಿದ್ದಾರೆ. ಕೇರಳ ಹಜ್ ವೆಲ್ಫೇರ್ ಫಾರಂನ ವತಿಯಿಂದ ಠಾಗೋರ್‌ಹಾಲ್‌ನಲ್ಲಿ ನಡೆದ ಏಕದಿನ ಹಜ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಗೋರಕ್ಷಣೆ ಹೆಸರಿನಲ್ಲಿ ಈವರೆಗೆ ದೇಶದಲ್ಲಿ 29 ಮಂದಿಯನ್ನು ಕೊಲ್ಲಲಾಗಿದೆ. ಹೆಚ್ಚಿನ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಅಹಂಕಾರವಿದು ಎಂದು ಅವರು ಹೇಳಿದರು.

ಗೋವಿನ ಹೆಸರಿನಲ್ಲಿ ಮನುಷ್ಯನನ್ನುಕೊಲ್ಲುವುದು ಸರಿಯಲ್ಲ ಎಂದು ಪ್ರಧಾನಿ ನೀಡಿದ ಹೇಳಿಕೆಯ ನಂತರವೂ ಉತ್ತರಭಾರತದಲ್ಲಿ ಅಂತಹ ಘಟನೆ ನಡೆದಿದೆ. ದೇಶದ ಸಣ್ಣ ಒಂದು ವಿಭಾಗದ ಜನರು ಇಂತಹ ದಾಳಿಯನ್ನು ನಡೆಸುತ್ತಿದ್ದಾರೆ. ಈಗ ದೇಶದಲ್ಲಿ ಕಷ್ಟದ ದಿನಗಳಿವೆ. ತಡವಾಗದೆ ಒಳ್ಳೆಯದಿನಗಳು ಮರಳಬಹುದು ಎಂದು ಅವರು ಆಶಾವಾದವನ್ನು ವ್ಯಕ್ತಪಡಿಸಿದರು. ದೇಶದಲ್ಲಿ ವಿಜ್ರಂಭಿಸುತ್ತಿರುವ ತಪ್ಪುಕೆಲಸಗಳ ವಿರುದ್ಧ ಜಾತ್ಯತೀತ ಮನೋಭಾವದವರು ಒಟ್ಟಾಗಿ ನಿಲ್ಲಬೇಕೆಂದು ಸಚಿವ ಜಲೀಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News