ಇಸ್ರೇಲ್ ಮಾಜಿ ಪ್ರಧಾನಿ ಜೈಲಿನಿಂದ ಬಿಡುಗಡೆ

Update: 2017-07-02 13:37 GMT

ಜೆರುಸಲೇಂ, ಜು. 2: ಭ್ರಷ್ಟಾಚಾರ ಪ್ರಕರಣದಲ್ಲಿ 27 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಇಸ್ರೇಲ್‌ನ ಮಾಜಿ ಪ್ರಧಾನಿ ಎಹೂದ್ ಒಲ್ಮರ್ಟ್‌ರನ್ನು ರವಿವಾರ ಬಿಡುಗಡೆ ಮಾಡಲಾಗಿದೆ.

ಅವರ ಅವಧಿಪೂರ್ವ ಬಿಡುಗಡೆಗೆ ಪರೋಲ್ ಮಂಡಳಿಯೊಂದು ಅನುಮೋದನೆ ನೀಡಿದ ದಿನಗಳ ಬಳಿಕ ಅವರು ಜೈಲಿನಿಂದ ಹೊರನಡೆದರು.

 71 ವರ್ಷದ ಒಲ್ಮರ್ಟ್‌ರನ್ನು ಇಸ್ರೇಲ್ ಭದ್ರತಾ ಪಡೆಗಳು ಜೈಲಿನಿಂದ ಅವರ ಮನೆಗೆ ಕರೆದುಕೊಂಡು ಹೋದವು.

ಅವಧಿಪೂರ್ವ ಬಿಡುಗಡೆಯ ಶರತ್ತುಗಳಂತೆ, ಒಲ್ಮರ್ಟ್ ಮುಂದಿನ ಕೆಲವು ತಿಂಗಳುಗಳ ಕಾಲ ಸಮುದಾಯ ಸೇವೆ ಮಾಡಬೇಕು, ತಿಂಗಳಲ್ಲಿ ಎರಡು ದಿನ ಪೊಲೀಸರ ಎದುರು ಹಾಜರಾಗಬೇಕು, ಮಾಧ್ಯಮಗಳಿಗೆ ಸಂದರ್ಶನ ನೀಡಬಾರದು ಮತ್ತು ದೇಶವನ್ನು ತೊರೆಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News