ಉಗ್ರ ಪ್ರಾಬಲ್ಯದ ಸಮುದ್ರದಲ್ಲಿ ಫಿಲಿಪ್ಪೀನ್ಸ್, ಅಮೆರಿಕದ ಜಂಟಿ ಗಸ್ತು

Update: 2017-07-02 13:58 GMT

ಮನಿಲಾ (ಫಿಲಿಪ್ಪೀನ್ಸ್), ಜು. 2: ಸ್ಥಳೀಯ ಬಂಡುಕೋರರ ಪಾರಮ್ಯದ ಪ್ರದೇಶವೆಂದೇ ಹೇಳಲಾಗುವ ಫಿಲಿಪ್ಪೀನ್ಸ್‌ನ ದಕ್ಷಿಣದ ಸಮುದ್ರದಲ್ಲಿ ಫಿಲಿಪ್ಪೀನ್ಸ್ ಮತ್ತು ಅಮೆರಿಕಗಳು ಶನಿವಾರ ಜಂಟಿ ಗಸ್ತು ನಡೆಸಿದವು.

ಈ ವಲಯದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕರು ಮತ್ತು ಕಡಲ್ಗಳ್ಳರ ಉಪಸ್ಥಿತಿಯ ಹಿನ್ನೆಲೆಯಲ್ಲಿ ಹೆಚ್ಚಿದ ಕಳವಳದ ನಡುವೆಯೇ ಈ ಜಂಟಿ ಕಾರ್ಯಾಚರಣೆ ನಡೆದಿದೆ.

ಅಮೆರಿಕ ನೌಕಾಪಡೆಯ ಯುಎಸ್‌ಎಸ್ ಕೊರೊನಾಡೊ ನೌಕೆ ಮತ್ತು ಫಿಲಿಪ್ಪೀನ್ಸ್‌ನ ಬಿಆರ್‌ಪಿ ರಾಮನ್ ಅಲ್ಕಾರ್ಝ್ ನೌಕೆಗಳು ಸುಲು ಸಮುದ್ರದಲ್ಲಿ ಗಸ್ತು ತಿರುಗಿದವು ಎಂದು ಅಮೆರಿಕ ರಾಯಭಾರ ಕಚೇರಿಯ ಹೇಳಿಕೆಯೊಂದು ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಸಮುದ್ರದ ಈ ಭಾಗದಲ್ಲಿ ಭಯೋತ್ಪಾದಕ ಗುಂಪುಗಳು ಹಲವಾರು ಅಪಹರಣಗಳನ್ನು ನಡೆಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News