×
Ad

ಜಿಎಸ್ ಟಿ ಜಾರಿ ವೇಳೆ ಜನಿಸಿದ ಮಗುವಿಗೆ ಪೋಷಕರಿಟ್ಟ ಹೆಸರೇನು ಗೊತ್ತೇ?

Update: 2017-07-02 20:18 IST

ಹೊಸದಿಲ್ಲಿ, ಜು.2: ದೇಶದಲ್ಲಿ ವಿನೂತನ ತೆರಿಗೆ ಪದ್ಧತಿ ಜಿಎಸ್ ಟಿ ಜೂನ್ 30ರಂದು ಮಧ್ಯರಾತ್ರಿ ಜಾರಿಗೆ ಬಂದಿತ್ತು. ಇದೇ ಸಮಯದಲ್ಲಿ ಮಹಿಳೆಯೊಬ್ಬರು ಮಗುವೊಂದಕ್ಕೆ ಜನ್ಮ ನೀಡಿದ್ದು, ಐತಿಹಾಸಿಕ ಕಾರ್ಯಕ್ರಮದ ನೆನಪಿಗಾಗಿ ಮಗುವಿಗೆ “ಜಿಎಸ್ ಟಿ” ಎಂದು ಹೆಸರಿಡಲಾಗಿದೆ.

ರಾಜಸ್ತಾನದ ಬೇವಾದ ಆಸ್ಪತ್ರೆಯೊಂದರಲ್ಲಿ ಮಧ್ಯರಾತ್ರಿ 12:02ಕ್ಕೆ ಮಗು ಜನಿಸಿತ್ತು. ಇದೇ ಸಮಯದಲ್ಲಿ ಜಿಎಸ್ ಟಿ ಅಧಿವೇಶನ ನಡೆದು, ಹೊಸ ತೆರಿಗೆ ನೀತಿ ಜಾರಿಗೆ ಬಂದಿದ್ದರಿಂದ ಮಗುವಿಗೆ “ಜಿಎಸ್ ಟಿ” ಎಂದು ಪೋಷಕರು ಹೆಸರಿಟ್ಟಿದ್ದಾರೆ.

ಈ ಬಗ್ಗೆ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಟ್ವೀಟ್ ಮಾಡಿ ಮಗುವಿಗೆ ಶುಭ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News