×
Ad

ತಮಿಳುನಾಡು: ಜು. 3ರಿಂದ ಚಿತ್ರಪದರ್ಶನ ರದ್ದು

Update: 2017-07-02 22:53 IST

ಚೆನ್ನೈ, ಜು. 1: ನೂತನ ಜಿಎಸ್‌ಟಿ ಅಡಿಯಲ್ಲಿ ಹೆಚ್ಚುವರಿ ತೆರಿಗೆ ಅಲ್ಲದೆ ಶೇ. 30 ಸ್ಥಳೀಯಾಡಳಿತದ ತೆರಿಗೆ ವಿಧಿಸಿರುವುದನ್ನು ವಿರೋಧಿಸಿ ತಮಿಳುನಾಡಿನ 1 ಸಾವಿರ ಚಿತ್ರಮಂದಿರಗಳು ರವಿವಾರ ಚಲನಚಿತ್ರ ಪ್ರದರ್ಶನ ರದ್ದುಗೊಳಿಸಲಿವೆ.

ಹಲವು ಚಿತ್ರಮಂದಿರಗಳು ನಿನ್ನೆ ಚಲನಚಿತ್ರ ಪ್ರದರ್ಶನ ರದ್ದುಗೊಳಿಸಿದ್ದವು. ಜುಲೈ 3ರಿಂದ ಎಲ್ಲ ಚಿತ್ರಮಂದಿರಗಳು ಚಿತ್ರಪ್ರದರ್ಶನ ರದ್ದುಗೊಳಿಸಲು ತಮಿಳುನಾಡು ಚಲನಚಿತ್ರ ಪ್ರದರ್ಶಕರ ಎಸೋಸಿಯೇಶನ್ ಶುಕ್ರವಾರ ನಿರ್ಧರಿಸಿದೆ. ಇದರಿಂದ ರಾಜ್ಯಾದ್ಯಂತ 1 ಸಾವಿರ ಚಿತ್ರಮಂದಿರಗಳು ಚಿತ್ರಪ್ರದರ್ಶನ ರದ್ದುಗೊಳಿಸಲಿವೆ ಎಂದು ಅಸೋಸಿಯೇಶನ್‌ನ ಅಧ್ಯಕ್ಷ ಅಭಿರಾಮಿ ರಾಮನಾಥ್ ತಿಳಿಸಿದ್ದಾರೆ.

 ತಮಿಳು ಫಿಲ್ಮ್ ಚೇಂಬರ್ ಆಫ್ ಕಾಮರ್ಸ್‌ನ ಮುಖ್ಯಸ್ಥರೂ ಆಗಿರುವ ಅವರು, ತೆರಿಗೆ ಪಾವತಿಸಲು ಸಾಮರ್ಥ್ಯ ಇಲ್ಲದೇ ಇರುವುದರಿಂದ ನಾವು ಚಿತ್ರಮಂದಿರ ಬಂದ್ ಮಾಡುತ್ತಿದ್ದೇವೆ. ಇದು ಸರಕಾರದ ವಿರುದ್ಧದ ನಡೆಯಲ್ಲ ಎಂದಿದ್ದಾರೆ.

 ಜಿಎಸ್‌ಟಿ ದರ 100 ರೂ. ಟಿಕೇಟ್‌ಗೆ 28 ರೂ. ಹಾಗೂ 100ಕ್ಕಿಂತ ಕಡಿಮೆ ದರದ ಟಿಕೇಟ್‌ಗೆ 18 ರೂ. ಇದನ್ನು ಹೊರತುಪಡಿಸಿ ಶೇ. 30 ಸ್ಥಳೀಯಾಡಳಿತದ ತೆರಿಗೆ ಪಾವತಿಸಬೇಕು ಎಂದು ಅವರು ಹೇಳಿದ್ದಾರೆ.

 ಸ್ಥಳೀಯಾಡಳಿತ ಶೇ. 30 ತೆರಿಗೆಯನ್ನು ಕೇಂದ್ರ ಕೂಡಲೇ ರದ್ದುಗೊಳಿಸಲು ಎಂದು ನಾವು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದೇವೆ. ಇದರಿಂದ ಜಿಎಸ್‌ಟಿ ಅಡಿಯಲ್ಲಿ ಬರುವ ಶೇ. 8 ಹೆಚ್ಚುವರಿ ತೆರಿಗೆ ಇಲ್ಲದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ನಾಳೆ ಸಿನೆಮಾ ಆರಂಭಿಸಿದ ಕೂಡಲೇ ನಾವು ನಗರಾಡಳಿತಕ್ಕೆ ಕೂಡಲೇ ತೆರಿಗೆ ಪಾವತಿಸಬೇಕು. ಸಿನೆಮಾ ಮಂದಿರ ಬಂದ್ ಮಾಡದೆ ನಮಗೆ ಬೇರೆ ದಾರಿ ಇಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News