1ಕೋಟಿ ರೂ ಮುಖಬೆಲೆಯ ಹಳೆನೋಟುಗಳು ಪತ್ತೆ: ಮೂವರ ಬಂಧನ

Update: 2017-07-03 08:42 GMT

ಪೆರಿಂದಲ್‍ಮಣ್ಣ,ಜು. 3: ಒಂದು ಕೋಟಿ ರೂ ಮುಖಬೆಲೆಯ ಹಳೆನೋಟುಗಳನ್ನು ಹೊಂದಿದ್ದ ಮೂವರನ್ನು ಪೆರಿಂದಲ್‍ಮಣ್ಣದಲ್ಲಿ ಬಂಧಿಸಲಾಗಿದೆ. ಕೇಂದ್ರಸರಕಾರ ಅಮಾನ್ಯಗೊಳಿಸಿದ 500,1000 ರೂಪಾಯಿ ನೋಟುಗಳನ್ನು ಪೊಲೀಸರು ಬಂಧನಕ್ಕೊಳಗಾದವರಿಂದ ವಶಪಡಿಸಿಕೊಂಡಿದ್ದಾರೆ.ಪೆರಿಂದಲ್‍ಮಣ್ಣ ಮನಾಯಿ ಬಸ್‍ಸ್ಟಾಂಡ್ ಸಮೀಪದಿಂದ ಆರೋಪಿಗಳನ್ನು ವಿಶೇಷ ತನಿಖಾ ದಳ ಹಣ ಸಮೇತ ಬಂಧಿಸಿದೆ. ಕುಂಞಮೊಯ್ದಿನ್(44),ಮುಹಮ್ಮದ್ ರಂಶಾದ್928), ನಿಝಾಂ(27) ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಗಳಾಗಿದ್ದಾರೆ.

ಇವರ ಕಾರನ್ನು ಕೂಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಂದು ತಿಂಗಳಲ್ಲಿ ಎರಡನೇ ಬಾರಿ ಪೆರಿಂದಲ್ ಮಣ್ಣದಲ್ಲಿ ಹಳೆನೋಟುಗಳ ಸಂಗ್ರಹವನ್ನು  ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ಮೂರು ಕೋಟಿ  ರೂಪಾಯಿಯ ಹಳೆನೋಟುಗಳೊಂದಿಗೆ ಐವರನ್ನು  ಪೊಲೀಸರು ಬಂಧಿಸಿದ್ದರು.  ಬಂಧಿತ ಆರೋಪಿಗಳಿಗೆ ಹವಾಲಾ ಜಾಲದೊಂದಿಗೆ ಸಂಬಂಧ ವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾರ್ಯಾಚರಣೆಯಲ್ಲಿ ವಿಶೇಷ ತನಿಖಾದಳದ ಮುಖ್ಯಸ್ಥ ಪೆರಿಂದಲ್ ಮಣ್ಣ ಡಿವೈಎಸ್ಪಿ ಎಂ.ಪಿ. ಮೋಹನಚಂದ್ರನ್, ಸಿಐ ಸಾಜು, ಕೆ. ಅಬ್ರಹಾಂ, ಪೆರಿಂದಲ್ ಮಣ್ಣ ಎಸೈ ಕೆ.ಸಿ. ಸುರೇಂದ್ರನ್. ವಿಶೇಷ ತನಿಖಾ ತಂಡದ ಸಿ.ಪಿ. ಮುರಳಿ, ಪಿ.ಎನ್ ಮೋಹನ್‍ಕೃಷ್ಣನ್, ಎನ್.ಡಿ. ಕೃಷ್ಣಕುಮಾರ್, ಎಂ.ಮನೋಜ್‍ಕುಮರ್, ದಿನೇಶ್, ವಿನೋಜ್, ಅನೀಶ್, ವಿಪಿನ್, ಪ್ರದೀಪ್,ಜಯನ್, ಸುರೇಶ್, ನೆವಿಲ್ ಫಾಸ್ಕಲ್ ಮುಂತಾದವರು  ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News