ಟ್ರಕ್ ಗೆ ಢಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಬಸ್ : 17 ಮಂದಿ ಮೃತಪಟ್ಟಿರುವ ಶಂಕೆ
Update: 2017-07-03 15:03 IST
ಜರ್ಮನಿ, ಜು.3: ಪ್ರವಾಸಿಗರು ಸಂಚರಿಸುತ್ತಿದ್ದ ಬಸ್ಸೊಂದು ಟ್ರಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಗ್ನಿ ಅನಾಹುತದಲ್ಲಿ 31 ಮಂದಿ ಗಾಯಗೊಂಡ ಘಟನೆ ನಡೆದಿದೆ. ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಉತ್ತರ ಬವಾರಿಯಾದ ಸ್ಟಾಂಬ್ಯಾಕ್ ಎಂಬಲ್ಲಿ ಈ ಘಟನೆ ನಡೆದಿದೆ. ಕೆಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಹೆಚ್ಚಿನ ಜನರು ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಇಬ್ಬರು ಚಾಲಕರು ಹಾಗೂ 46 ಮಂದಿ ಪ್ರಯಾಣಿಕರಿದ್ದ ಬಸ್ ಟ್ರಕ್ಕೊಂದಕ್ಕೆ ಢಿಕ್ಕಿ ಹೊಡೆದಿತ್ತು.
“17 ಮಂದಿ ಮೃತಪಟ್ಟಿದ್ದಾರೆ ಎನ್ನುವುದನ್ನು ದೃಢೀಕರಿಸಲು ಸಾಧ್ಯವಿಲ್ಲ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಲಾವ್ ಸಿಝ್ ನ ಪೂರ್ವ ಪ್ರಾಂತ್ಯದಿಂದ ನುರೆಂಬರ್ಗ್ ಗೆ ಹೊರಟಿದ್ದ ಬಸ್ ಸ್ಟಾಂಬ್ಯಾಕ್ ನಲ್ಲಿ ಟ್ರಕ್ಕೊಂದಕ್ಕೆ ಢಿಕ್ಕಿ ಹೊಡೆದು, ಅಗ್ನಿ ಅನಾಹುತಕ್ಕೆ ಈಡಾಗಿತ್ತು.