×
Ad

"ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಗೆ ಎರಡು ಬಾರಿ ತೆರಿಗೆ": ಸುದ್ದಿಯ ಹಿಂದಿನ ಅಸಲಿಯತ್ತಿದು…

Update: 2017-07-03 15:52 IST

ಹೊಸದಿಲ್ಲಿ, ಜು.3: ಜಿಎಸ್ ಟಿ ತೆರಿಗೆ ಪದ್ಧತಿ ದೇಶದಲ್ಲಿ ಜಾರಿಗೆ ಬಂದ ನಂತರ ಹಲವಾರು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೇ ರೀತಿಯಲ್ಲಿ ಮೊಬೈಲ್, ಗ್ಯಾಸ್, ವಿದ್ಯುತ್  ಹಾಗೂ ಇತರ ಸೇವೆಗಳಿಗೆ ಸಂಬಂಧಿಸಿ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ ಎರಡು ಬಾರಿ ತೆರಿಗೆ ಪಾವತಿಸಬೇಕಾಗಿದೆ ಎನ್ನುವ ಸುದ್ದಿಯೂ ವಾಟ್ಸ್ಯಾಪ್ ನಲ್ಲಿ ಹರಿದಾಡುತ್ತಿದ್ದು, ಆದರೆ ಈ ವರದಿ ಸುಳ್ಳು ಎಂದು “ದ ಕ್ವಿಂಟ್” (The Quint) ವರದಿ ಮಾಡಿದೆ.

ಸೇವೆಗಳ ಬಿಲ್ ನಲ್ಲಿ ಹಾಗೂ ಕ್ರೆಡಿಟ್ ಕಾರ್ಡ್ ನಲ್ಲಿ ಮೊತ್ತ ಪಾವತಿಸಿದ ನಂತರ ಜಿಎಸ್ ಟಿ ತೆರಿಗೆ ಬೀಳಲಿದೆ ಎನ್ನುವ ಸಂದೇಶಗಳು ಹರಿದಾಡುತ್ತಿತ್ತು. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಕಂದಾಯ ಸಚಿವ ಡಾ.ಹಸ್ಮುಖ್ ಆಧಿಯಾ ಕ್ರೆಡಿಟ್ ಕಾರ್ಡ್ ಮೂಲಕ ಸೇವೆಗಳಿಗೆ ಪಾವತಿ ಮಾಡಿದರೆ ಎರಡು ಬಾರಿ ತೆರಿಗೆ ಬೀಳಲಿದೆ ಎನ್ನುವ ತಪ್ಪು ಸಂದೇಶ ರವಾನೆಯಾಗುತ್ತಿದೆ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News