ಜಿ20 ಸಮ್ಮೇಳನದಲ್ಲಿ ಮೋದಿ, ಕ್ಸಿ ಮಾತುಕತೆ

Update: 2017-07-03 14:28 GMT

ಬೀಜಿಂಗ್, ಜು. 3: ಸಿಕ್ಕಿಂ ಗಡಿಯಲ್ಲಿ ಭಾರತ ಮತ್ತು ಚೀನಾಗಳ ನಡುವಿನ ಸಂಘರ್ಷ ಸ್ಫೋಟಕ ಹಂತವನ್ನು ತಲುಪಿರುವಂತೆಯೇ, ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಈ ವಾರ ನಡೆಯಲಿರುವ ಜಿ20 ಶೃಂಗಸಮ್ಮೇಳನದಲ್ಲಿ ಮುಖಾಮುಖಿಯಾಗಲಿದ್ದಾರೆ.

ಜಿ20 ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಐದು ಪ್ರಮುಖ ಅಭಿವೃದ್ಧಿಶೀಲ ಆರ್ಥಿಕತೆಯನ್ನು ಹೊಂದಿರುವ ದೇಶಗಳಾದ ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಗಳ ನಾಯಕರ ನಡುವೆ ನಡೆಯುವ ಅನೌಪಚಾರಿಕ ಮಾತುಕತೆಗಳ ಭಾಗವಾಗಿ ಈ ಭೇಟಿ ನಡೆಯಲಿದೆ ಎಂದು ಚೀನಾದ ಉಪ ವಿದೇಶ ಸಚಿವ ಲಿ ಬವೊಡೊಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಹ್ಯಾಂಬರ್ಗ್‌ನಲ್ಲಿ ಜುಲೈ 7 ಮತ್ತು 8ರಂದು 12ನೆ ಜಿ20 ಶೃಂಗ ಸಮ್ಮೇಳನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News