ಟ್ರಂಪ್ ವಿರುದ್ಧ ಬೀದಿಗಿಳಿದ ಸಾವಿರಾರು ಜನ

Update: 2017-07-03 14:43 GMT

ಲಾಸ್ ಏಂಜಲಿಸ್, ಜು. 3: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ಕಲಾಪವನ್ನು ಕೈಗೆತ್ತಿಕೊಳ್ಳುವಂತೆ ಸಂಸತ್ತು ಕಾಂಗ್ರೆಸ್ಸನ್ನು ಒತ್ತಾಯಿಸಿ ಸಾವಿರಾರು ಜನರು ರವಿವಾರ ದೇಶದ 46 ನಗರಗಳಲ್ಲಿ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದರು.

ಮಾನವಹಕ್ಕುಗಳ ಕಾರ್ಯಕರ್ತರು ಏರ್ಪಡಿಸಿದ ಪ್ರತಿಭಟನಾ ಮೆರವಣಿಗೆಗಳ ವೇಳೆ ಟ್ರಂಪ್‌ರ ವಲಸೆ ನೀತಿಗಳು, ವಿದೇಶಗಳಲ್ಲಿ ಅವರು ಹೊಂದಿರುವ ವ್ಯಾಪಾರ ನಂಟುಗಳು ಮತ್ತು 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ನಡೆಸಿದೆಯೆನ್ನಲಾದ ಹಸ್ತಕ್ಷೇಪಗಳ ವಿರುದ್ಧ ಪ್ರತಿಭಟಿಸಲೂ ಜನರಿಗೆ ಅವಕಾಶ ನೀಡಲಾಯಿತು.

ಟ್ರಂಪ್ ನ್ಯಾಯವನ್ನು ತಡೆದಿದ್ದಾರೆ ಮತ್ತು ವಿದೇಶಿ ಭತ್ತೆಗಳ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂಬ ಸಂಶಯಗಳು, ಅಧ್ಯಕ್ಷರ ವಿರುದ್ಧ ತನಿಖೆ ನಡೆಸಲು ಮತ್ತು ಅವರನ್ನು ದೋಷಾರೋಪಣೆಗೆ ಗುರಿಪಡಿಸಲು ಕಾಂಗ್ರೆಸ್‌ಗೆ ಸಾಂವಿಧಾನಿಕ ವೌಲ್ಯವುಳ್ಳ ಕಾರಣಗಳಾಗಿವೆ ಎಂದು ಪ್ರತಿಭಟನಕಾರರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News