×
Ad

ಅಮೆರಿಕ: ಪ್ರತಿಷ್ಠಿತ ಭಾಷಣ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಸಿಖ್ ವಿದ್ಯಾರ್ಥಿ

Update: 2017-07-03 20:51 IST

ಅಮೆರಿಕ, ಜು.3: ಅಮೆರಿಕಾದಲ್ಲಿ ನಡೆದ ದೇಶದ ಅತ್ಯಂತ ಪ್ರತಿಷ್ಠಿತ ರಾಷ್ಟ್ರೀಯ ಭಾಷಣ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕನ್ ಸಿಖ್ ವಿದ್ಯಾರ್ಥಿ ಜಯಿಸಿದ್ದಾರೆ.

ಸಾಮಾಜಿಕ ಸಮಸ್ಯೆಗಳ ವಿಷಯದಲ್ಲಿ “ಲೆಟ್ಸ್ ಡಾನ್ಸ್” ಎನ್ನುವ ಭಾಷಣವೊಂದನ್ನು ಭಾರತೀಯ ಮೂಲದ ಜೆ.ಜೆ. ಕಪೂರ್ ಪ್ರಸ್ತುತಪಡಿಸಿದರು. ಬಾಲಿವುಡ್ ನೃತ್ಯವೊಂದರಿಂದ ಆರಂಭಗೊಂಡ ಭಾಷಣದಲ್ಲಿ ಕಪೂರ್ ಸಿಖ್ – ಅಮೆರಿಕನ್ ಆಗಿ ತಮ್ಮ ಅನುಭವವನ್ನು ವಿವರಿಸಿದರು. ಸೆಮಿಫೈನಲ್ ಹಾಗೂ ಪೈನಲ್ ನಲ್ಲೂ ಟಾಪ್ ರ್ಯಾಂಕಿಂಗ್ ಗಳಿಸಿದ ಅವರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ವೆಸ್ಟ್ ಡೆಸ್ ಮೊಯ್ನೆಸ್ ನ ವ್ಯಾಲಿ ಹೈಸ್ಕೂಲ್ ನ ವಿದ್ಯಾರ್ಥಿಯಾಗಿರುವ ಕಪೂರ್ 9/11ರ ದಾಳಿಯ ನಂತರ ಅಮೆರಿಕದಲ್ಲಿನ ಸಿಖ್ಖರು ಹಾಗೂ ಮುಸ್ಲಿಮರ ಬಗ್ಗೆ ತಮ್ಮ ಭಾಷಣದಲ್ಲಿ ವಿವರಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News