ಪಶ್ಚಿಮಬಂಗಾಳದಲ್ಲಿ ಕೋಮು ಹಿಂಸಾಚಾರ

Update: 2017-07-04 16:42 GMT

ಕೋಲ್ಕತಾ, ಜು. 4: ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಉತ್ತರ 24 ಪರಗಣ ಜಿಲ್ಲೆಯಗಲ್ಲಿ ಕೋಮು ಹಿಂಸಾಚಾರ ಆರಂಭವಾಗಿದೆ.

ಕೋಮು ಹಿಂಸಾಚಾರದ ಹಿನ್ನೆಲೆಯಲ್ಲಿ 300 ಅರೆ ಸೇನಾ ಪಡೆ ಸಿಬಂದಿ ಇಲ್ಲಿಗೆ ಧಾವಿಸಿದ್ದಾರೆ.

 ಫೇಸ್‌ಬುಕ್‌ನಲ್ಲಿ ಆಕ್ಷಾಪಾರ್ಹ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಬಸಿರ್ಹಾತ್ ಉಪವಲಯದ ಬದುರಿಯಾದಲ್ಲಿ ಎರಡು ಸಮುದಾಯಗಳಿಗೆ ಸೇರಿದ ವ್ಯಕ್ತಿಗಳಿಂದ ಘರ್ಷಣೆ ಆರಂಭವಾಯಿತು ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪವಿತ್ರ ಸ್ಥಳದ ಬಗ್ಗೆ ಫೇಸ್‌ಬುಕ್‌ನಲ್ಲಿ ಹಾಕಲಾದ ಪೋಸ್ಟ್‌ಗೆ ಸಂಬಂಧಿಸಿ ಸಂಜೆ ಎರಡು ಗುಂಪುಗಳ ನಡುವೆ ಘರ್ಷಣೆ ಆರಂಭವಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪರಿಸ್ಥಿತಿ ನಿಯಂತ್ರಿಸಲು ಸ್ಥಳೀಯ ಪೊಲೀಸರಿಗೆ ನೆರವು ನೀಡಲು 300 ಸಿಬಂದಿ  ಇರುವ ಅರೆಸೈನಿಕ ಪಡೆಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News