ವಿಮಾನದಲ್ಲಿ ಪ್ರಯಾಣಿಸಿದ ಸಮುದ್ರದೇವತೆ!: ಫೋಟೊ ವೈರಲ್
Update: 2017-07-05 19:58 IST
ಸಿಂಗಪೂರ್, ಜು.5: ಗಾಢ ಬಣ್ಣದ ಧಿರಿಸು ಹಾಗೂ ಅಲಂಕೃತ ಕಿರೀಟಧಾರಿಯಾದ ಚೀನಾದ ದೇವತೆಯ ಪ್ರತಿಮೆಯೊಂದು ವಿಮಾನದಲ್ಲಿ ಪ್ರಯಾಣಿಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಕ್ಷಿಣ ಚೀನಾದ ಕ್ಸಿಯಾಮೆನ್ ನಿಂದ ಕೌಲಾಲಂಪುರಕ್ಕೆ ಹೊರಟಿದ್ದ ವಿಮಾನದ ಬ್ಯುಸಿನೆಸ್ ಕ್ಲಾಸ್ ವಿಲಾಸಿ ಆಸನದಲ್ಲಿ ಚೀನಾದ ಸಮುದ್ರದೇವತೆ "ಮಝು" ಇದರ ಆರು ಅಡಿ ಎತ್ತರದ ಪ್ರತಿಮೆಯನ್ನು ಸಾಗಿಸಿದ ಚಿತ್ರವನ್ನು ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ.
ಕ್ಸಿಯಾಮೆನ್ ಏರ್ ಲೈನ್ಸ್ ನ 19,449 ರೂ. ಟಿಕೆಟ್ ದರದ ಈ ವಿಲಾಸಿ ಆಸನದಲ್ಲಿ ಪ್ರಯಾಣಿಸಿದ ಮಝು ದೇವತೆಗಾಗಿ ಕೆಲವು ಸೀಟ್ ಗಳನ್ನು ಕೂಡ ತೆರವುಗೊಳಿಸಲಾಗಿತ್ತು. ಇಂಟರ್ ನೆಟ್ ನಲ್ಲಿ ವೈರಲ್ ಆಗಿರುವ ಈ ಚಿತ್ರಕ್ಕೆ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.