×
Ad

ಬ್ರಿಟನ್: ನಿಕಾಬ್ ಹರಿದು ಹಲ್ಲೆ ನಡೆಸಿದಾತನಿಗೆ 15 ತಿಂಗಳು ಜೈಲು

Update: 2017-07-05 20:58 IST

ಲಂಡನ್, ಜು. 5: ಕಳೆದ ವರ್ಷ ನಡೆದ ‘ಬ್ರೆಕ್ಸಿಟ್’ ಮತದಾನದ ಬಳಿಕ ಬ್ರಿಟನ್‌ನ ಮಾರಾಟ ಮಳಿಗೆಯೊಂದರಲ್ಲಿ ಮುಸ್ಲಿಮ್ ಮಹಿಳೆಯೊಬ್ಬರ ನಿಕಾಬ್ ಹರಿದ 56 ವರ್ಷದ ವ್ಯಕ್ತಿಯೊಬ್ಬನಿಗೆ ಬ್ರಿಟನ್ ನ್ಯಾಯಾಲಯವೊಂದು 15 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಕಳೆದ ವರ್ಷದ ಜುಲೈನಲ್ಲಿ ಮಹಿಳೆಯು ತನ್ನ ಚಿಕ್ಕ ಪ್ರಾಯದ ಮಗನೊಂದಿಗೆ ಸಂಡರ್‌ಲ್ಯಾಂಡ್ ಶಾಪಿಂಗ್ ಸೆಂಟರ್‌ನಲ್ಲಿದ್ದಾಗ ಪೀಟರ್ ಸ್ಕಾಟ್ ಹಲ್ಲೆ ನಡೆಸಿದ್ದನು.

ಜನಾಂಗೀಯ ಪ್ರೇರಿತ ಹಲ್ಲೆ ನಡೆಸಿರುವುದನ್ನು ಸ್ಕಾಟರ್ ನ್ಯಾಯಾಲಯದಲ್ಲಿ ಒಪ್ಪಿಕೊಂಡನು.

ನ್ಯೂಕ್ಯಾಸಲ್ ಕ್ರೌನ್ ನ್ಯಾಯಾಲಯವು ಮಂಗಳವಾರ ಆತನಿಗೆ 15 ತಿಂಗಳ ಜೈಲು ಶಿಕ್ಷೆ ವಿಧಿಸಿತು.

‘‘ನೀವೀಗ ನಮ್ಮ ದೇಶದಲ್ಲಿದ್ದೀರಿ... ಮೂರ್ಖ ಮುಸ್ಲಿಮರೆ’’ ಎಂದು ಹೇಳಿ ಆತ ಹಲ್ಲೆ ನಡೆಸಿದನು ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News