ಕೋವಿಂದ ದಲಿತರಲ್ಲ: ಲಾಲು ಪ್ರಸಾದ್
Update: 2017-07-05 22:32 IST
ಪಾಟ್ನಾ, ಜು.5: ರಾಷ್ಟ್ರಪತಿ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವಾಗ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್‌ನಾಥ್ ಕೋವಿಂದ್ ದಲಿತ ಅಲ್ಲ ಎಂದಿದ್ದಾರೆ.
ಪಾಟ್ನಾದಲ್ಲಿ ಆರ್‌ಜೆಡಿಯ 21ನೇ ಸ್ಥಾಪಕ ದಿನಾಚರಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಂದ್ ಕೋಲಿ ಸಮುದಾಯಕ್ಕೆ ಸೇರಿದವರು. ಗುಜರಾತ್‌ನಲ್ಲಿ ಕೋಲಿ ಸಮುದಾಯ ಒಬಿಸಿಗೆ ಸೇರಿದೆ. ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಈ ಸಮುದಾಯದ ಜನರು ಕೇವಲ ಶೇ. 6 ಇದ್ದಾರೆ ಎಂದರು.
ರಾಷ್ಟ್ರಪತಿ ಚುನಾವಣೆಯಲ್ಲಿ ಮೀರಾ ಕುಮಾರ್ ಅವರನ್ನು ಗೆಲ್ಲಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಲಾಲು ಪ್ರಸಾದ್ ಹೇಳಿದರು.