60,000 ಕೋ.ರೂ.ನಷ್ಟ ಪರಿಹಾರ ಕೋರಿ ಪ.ಬಂಗಾಳ ವಿರುದ್ಧ ದಾವೆಗೆ ಸಿಕ್ಕಿಂ ನಿರ್ಧಾರ

Update: 2017-07-06 12:12 GMT

ಗ್ಯಾಂಗ್ಟಕ್,ಜು.6: ಪ್ರತ್ಯೇಕ ಗೂರ್ಖಾಲ್ಯಾಂಡ್ ಸ್ಥಾಪನೆಗಾಗಿ ನಡೆಯುತ್ತಿರುವ ಮುಷ್ಕರದಿಂದಾಗಿ ತನಗೆ ಭಾರೀ ಆದಾಯ ನಷ್ಟವಾಗಿದೆ ಎಂದು ಆರೋಪಿಸಿರುವ ಸಿಕ್ಕಿಂ ಪಶ್ಚಿಮ ಬಂಗಾಳ ಸರಕಾರದಿಂದ ಪರಿಹಾರವನ್ನು ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ನಿರ್ಧರಿಸಿದೆ.

ಸಿಕ್ಕಿಂ ಸರಕಾರದ ಲೆಕ್ಕಾಚಾರದಂತೆ ಅದು ಗೂರ್ಖಾಲ್ಯಾಂಡ್ ಸ್ಥಾಪನೆಗೆ ಸಂಬಂಧಿಸಿ ಪ್ರತಿಭಟನೆಗಳಿಂದಾಗಿ ಕಳೆದ 32 ವರ್ಷಗಳಲ್ಲಿ ಸುಮಾರು 60,000 ಕೋ.ರೂ.ಆದಾಯ ನಷ್ಟವನ್ನು ಅನುಭವಿಸಿದೆ.

ಬುಧವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಕ್ಕಿಂ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಅವರು ಇತ್ತೀಚಿಗೆ ಪ.ಬಂಗಾಳದ ಸಿಲಿಗುರಿಯಲ್ಲಿ ಸಿಕ್ಕಿಂ ನೋಂದಣಿಯ ವಾಹನಗಳ ಮೇಲಿನ ದಾಳಿಗಳನ್ನು ಖಂಡಿಸಿದ್ದಲ್ಲದೆ, ಸಿಕ್ಕಿಂ ಜನತೆಯು ಚೀನಾ ಮತ್ತು ಪ.ಬಂಗಾಳ ನಡುವೆ ಸ್ಯಾಂಡ್‌ವಿಚ್ ಆಗಲು ರಾಜ್ಯವನ್ನು ಭಾರತ ಒಕ್ಕೂಟದೊಂದಿಗೆ ವಿಲೀನಗೊಳಿಸಿರಲಿಲ್ಲ ಎಂದು ಕಿಡಿಕಾರಿದ್ದರು.

ಚಾಮ್ಲಿಂಗ್ ಅವರು ಗೂರ್ಖಾಲ್ಯಾಂಡ್ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ ಬಳಿಕ ಸಿಕ್ಕಿಂ ವಿರುದ್ಧ ದಾಳಿಗಳು ಆರಂಭವಾಗಿವೆ.

ನಿರ್ಬಂಧಗಳಿಂದಾಗಿ ಆಹಾರ ಮತ್ತು ಅಗತ್ಯ ಸಾಮಗ್ರಿಗಳ ಕೊರತೆಯುಂಟಾಗುವ ಆತಂಕ ಬೇಡ ಎಂದು ಚಾಮ್ಲಿಂಗ್ ಜನರಿಗೆ ಕಿವಿಮಾತು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News