ಜು.9ರಂದು ಐಎಎಸ್, ಕೆಎಎಸ್ ಪರೀಕ್ಷೆಗಳ ಬಗ್ಗೆ ಉಚಿತ ಮಾರ್ಗದರ್ಶನ ಶಿಬಿರ

Update: 2017-07-07 06:25 GMT

ಮಂಗಳೂರು, ಜು.7: ನಗರದ ಏಸ್ ಫೌಂಡೇಶನ್ ಸಂಸ್ಥೆಯು ‘ನಾಗರಿಕಾ ಸೇವಾ ಪರೀಕ್ಷೆ’ಗಳ ಬಗ್ಗೆ ಜು.9ರಂದು ಮಾರ್ಗದರ್ಶನ ಶಿಬಿರವನ್ನು ಹಮ್ಮಿಕೊಂಡಿದೆ.

ಶಿಬಿರವು ಅಂದು ಬೆಳಗ್ಗೆ 9:30ಕ್ಕೆ ಕಂಕನಾಡಿ ಬಾಲಿಕಾಶ್ರಮ ರಸ್ತೆಯಲ್ಲಿರುವ ಜೆ.ಎಫ್. ಸಭಾಂಗಣದಲ್ಲಿ ನಡೆಯಲಿದೆ. ಐಎಎಸ್-ಕೆಎಎಸ್ ಮುಂತಾದ ನಾಗರಿಕ ಸೇವೆಗೆ ಸೇರಲಿಚ್ಛಿಸುವ ಆಕಾಂಕ್ಷಿಗಳು ಮೊ.ಸಂ.: 7090109997ಕ್ಕೆ ಕರೆ ಮಾಡಬಹುದು ಅಥವಾ ವಾಟ್ಸ್‌ಆ್ಯಪ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.

ಶಿಬಿರವು ಸಂಪೂರ್ಣ ಉಚಿತವಾಗಿದ್ದು, ಬೆಳಗ್ಗಿನ ಮತ್ತು ಮಧ್ಯಾಹ್ನದ ಊಟೋಪಚಾರದ ವ್ಯವಸ್ಥೆ ಇರುತ್ತದೆ. ಆಸಕ್ತರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News