×
Ad

ಉ.ಪ್ರದೇಶ: ಹೆಂಡ ಕುಡಿದು ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆ

Update: 2017-07-08 21:26 IST

  ಅಝಂಗಡ, ಜು.8: ಉತ್ತರಪ್ರದೇಶದ ಕೆವಾತಿಯ ಗ್ರಾಮದಲ್ಲಿ ಹೆಂಡ (ಕಳ್ಳು) ಕುಡಿದ ಮತ್ತಿಬ್ಬರು ಮೃತಪಡುವುದರೊಂದಿಗೆ ಕಳ್ಳು ಕುಡಿದು ಮೃತಪಟ್ಟವರ ಸಂಖ್ಯೆ 7ಕ್ಕೇರಿದೆ.

ಶುಕ್ರವಾರ ರಾತ್ರಿಯಿಂದ ಕಳ್ಳುಕುಡಿದು ಅಸ್ವಸ್ಥರಾದ ಒಟ್ಟು 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು 1,000 ಲೀಟರ್ ಕಳ್ಳು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.

 ಸಾವಿಗೆ ಕಾರಣವೇನೆಂದು ಖಚಿತವಾಗಿಲ್ಲ. ಮೃತಪಟ್ಟವರ ದೇಹದ ಮರಣ್ತೋತರ ಪರೀಕ್ಷೆಗೆ ಕಾಯಲಾಗುತ್ತಿದೆ ಎಂದವರು ತಿಳಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಆದಿತ್ಯನಾಥ್ , ಶುಕ್ರವಾರ ಮೂವರು ಪೊಲೀಸರು ಹಾಗೂ ಅಬಕಾರಿ ಇಲಾಖೆಯ ಆರು ಉದ್ಯೋಗಿಗಳನ್ನು ಅಮಾನತುಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News