×
Ad

ಇಬ್ಬರು ಮಕ್ಕಳನ್ನು ಕಡಿದು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ

Update: 2017-07-09 15:26 IST

ಕಯಕ್ಕುಟ್ಟಂ(ತಿರುವನಂತಪುರಂ),ಜು. 9: ಮಕ್ಕಳನ್ನು ಕಡಿದು ಕೊಂದು ಗಿಡಗಂಟಿಗಳ ನಡುವೆ ಎಸೆದ ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತಿರುವನಂತಪುರಂ ಕಣ್ಣಮ್ಮುಲ ಚೆನ್ನಿಲಾಡ್ ಸೇಂಟ್ ತೆರೆಸಾ ಚರ್ಚ್ ಸಮೀಪದ ಸ್ನೇಹ ಭವನದ ಶಿಬಿ(40) ಈ ಕ್ರೂರ ಕೃತ್ಯವೆಸಗಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಕ್ಕಳಾದ ಸೆಬಿನ್, ಸೇಬಾರನ್ನು ಆತ ಕಡಿದು ಕೊಂದಿದ್ದಾನೆ.

 ವೇಳ ಸೇತುವೆ ಸಮೀಪ ಮೃತ ದೇಹಗಳು ಪತ್ತೆಯಾಗಿವೆ. ಮಕ್ಕಳನ್ನು ಕೊಂದ ಬಳಿ ಶಿಬಿ ರೈಲಿನ ಮುಂದೆ ಹಾರಿರಬೇಕೆಂದು ಶಂಕಿಸಲಾಗಿದೆ. ಶನಿವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಬೆಳಗ್ಗೆ ರೈಲು ಪಟ್ಟಿಯನ್ನು ಪರೀಕ್ಷಿಸುವ ರೈಲ್ವೆ ಗ್ಯಾಂಗ್‍ಮೆನ್‍ಗೆ ಕೈಯ ಭಾಗ ಮೊದಲು ಕಂಡು ಬಂದಿದೆ. ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಹುಡುಕಿದಾಗ ಸಮೀಪದ ಗಿಡಗಂಟಿಗಳ ನಡುವೆ ಇಬ್ಬರು ಮಕ್ಕಳ ಮೃತದೇಹಗಳು ಕಂಡು ಬಂದವು.

ಮಕ್ಕಳ ಕೊರಳನ್ನು ಕಡಿದು ಕೊಲೆಮಾಡಲಾಗಿದೆ. ಸೆಬಿಯ ಕೈಗಳಲ್ಲೂ ಇರಿತದ ಗಾಯಗಳಾಗಿವೆ. ಘಟನೆಯ ಸ್ಥಳದಲ್ಲಿ ಸ್ಕೂಲ್ ಬ್ಯಾಗ್‍ ಕೂಡಾ ಪತ್ತೆಯಾಗಿದೆ. ಅದನ್ನು ಕತ್ತಿ ತರಲು ಉಪಯೋಗಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ನಂತರ ಆಕ್ಕುಳಂ ನದಿಯಿಂದ  ಅಗ್ನಿಶಾಮಕ ದಳದ ಮುಳುಗು ತಜ್ಞರು ಶಿಬಿನ್‍ನ ಮೃತದೇಹವನ್ನು ಹೊರತೆಗೆದಿದ್ದಾರೆ. ಶಿಬಿಯ ಸೊಂಟದಿಂದ ಕೆಳಗಿನ ಭಾಗ ಪತ್ತೆಯಾಗಿಲ್ಲ.

ಮೂರುಮಂದಿ ಕಾಣೆಯಾಗಿದ್ದಾರೆಂದು ಮೆಡಿಕಲ್ ಕಾಲೇಜು ಪೊಲೀಸರಿಗೆ ಶಿಬಿನ್‍ನ ಪತ್ನಿ ದೂರು ನೀಡಿದ್ದರು. ಶಿಬಿನ್ ಪತ್ನಿ ಹನ್ನಾ ಪೊಲೀಸ್ ಕ್ಯಾಂಪ್‍ನಲ್ಲಿ ಉದ್ಯೋಗಿಯಾಗಿದ್ದಾರೆ. ಕುಟುಂಬ ಕಲಹದ ಹಿನ್ನೆಲೆಯಲ್ಲಿ ಹನ್ನಾ ಮತ್ತು ಶಿಬಿನ್ ನಡುವೆ ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿದೆ. ಮಕ್ಕಳನ್ನು ನೋಡಲೇಂದು ಬಂದ ಶಿಬಿ ಮಕ್ಕಳನ್ನು ಚರ್ಚ್‍ಗೆ ಕರೆದುಕೊಂಡು ಹೋಗಿ ಬರುವೆ ಎಂದು ಕರೆದುಕೊಂಡು ಹೋದವನು ಈ ಕೃತ್ಯ ಎಸಗಿದ್ದಾನೆ. ತಡರಾತ್ರೆಯವರೆಗೆ ಮಕ್ಕಳು ಮತ್ತು ಶಿಬಿ ಬರುವುದು ಕಾಣಿಸದ್ದರಿಂದ ಅನ್ನಾ ಮೆಡಿಕಲ್ ಕಾಲೇಜು ಪೊಲೀಸರಿಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News